ಜಿಲ್ಲಾ ಕ್ರೀಡಾಂಗಣದಲ್ಲಿ 100ಅಡಿ ರಾಷ್ಟ್ರಧ್ವಜ ಸ್ಥಂಭ ನಿರ್ಮಿಸಲು ಜಿಲ್ಲಾಧಿಕಾರಿ ಸೂಚನೆ

ಬೀದರ ಆ. 3: 75ನೇ ಅಜಾದಿ ಕಾ ಅಮೃತ ಮಹೊತ್ಸವದ ನಿಮಿತ್ಯ ನಗರದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಬೃಹತ್ ಧ್ವಜಸ್ಥಂಭ ನಿರ್ಮಿಸಿ ರಾಷ್ಟ್ರ ಧ್ವಜ ಹಾರಿಸುವ ಕುರಿತು ಜಿಲ್ಲಾಧಿಕಾರಿಗಳಾದ ಗೊವಿಂದ ರೆಡ್ಡಿ ಅವರು ತಿರ್ಮಾನಿಸಿದರು.

ಮಂಗಳವಾರ ನಗರದ ವಿವಿಧಡೆ ಅಧಿಕಾರಿಗಳೊಂದಿಗೆ ಸ್ಥಳಗಳನ್ನು ಪರಿಶೀಲನೆ ಮಾಡಿ ಅಂತಿಮವಾಗಿ ಜಿಲ್ಲಾ ನೇಹರು ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಸ್ಥಂಭ ನಿರ್ಮಿಸಿ ಆಗಸ್ಟ್ 15ರಂದು ಧ್ವಜರೋಹಣ ಮಾಡಲಾಗುವುದು ಎಂದು ತಿಳಿಸಿದರು.

100 ಅಡಿ ಎತ್ತರದ ಧ್ವಜಸ್ಥಂಭಕ್ಕೆ 20*30 ಅಳತೆಯ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು. ಈ ಕೆಲಸವನ್ನು ಅಚ್ಚುಕಟ್ಟಾಗಿ ಆಗಸ್ಟ್ 12ರೊಳಗಾಗಿ ಪೂರ್ಣಗೊಳಿಸಲು ನಗರಸಭೆ ಆಯುಕ್ತರಾದ ಪ್ರಭುದ್ಧ ಕಾಂಬಳೆ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ಶಿಲ್ಪಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕ ಕಿಶೋರ ಬಾಬು, ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ಮೊಹಮ್ಮದ ನಯೀಮ್ ಮೋಮಿನ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಅಭಯ ಕುಮಾರ, ಯುವಜನ ಸೇವ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮೃತ ಅಷ್ಟಗಿ, ಜಿಲ್ಲಾ ಸಾಂಖಿಕ ಅಧಿಕಾರಿಗಳಾದ ಸುವರ್ಣ, ಪಶು ಸಂಗೊಪನಾ ಇಲಾಖೆಯ ಹಿರಿಯ ತಜ್ಞರಾದ ಗೌತಮ್ ಅರಳಿ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಜಶೇಖರ ಮಠಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.