ಜಿಲ್ಲಾ ಕೇಂದ್ರ ಹೊಸಪೇಟೆ ತಲುಪಿದ ಧ್ವಜಸ್ಥಂಭ.


ಸಂಜೆವಾಣಿ ವಾರ್ತೆ
ಹೊಸಪೇಟೆ : ಹೊಸಪೇಟೆಯಲ್ಲಿ ಸ್ಥಾಪನೆಯಾಗಿ ಆಗಸ್ಟ್ 15 ರಂದು ರಾರಾಜಿಸಲಿರುವ ಐತಿಹಾಸಿಕ ಧ್ವಜಸ್ಥಂಭ ಹೊಸಪೇಟೆಗೆ ತಲುಪಿದೆ.
ನಾಲ್ಕನೇ ಅತಿ ಎತ್ತರದ ಧ್ವಜಸ್ಥಂಬ
ಹೊಸಪೇಟೆಯಲ್ಲಿ 405 ಅಡಿ ಎತ್ತರದ ಧ್ವಜ ಸ್ಥಂಭ ಸ್ಥಾಪನೆಯಾಗಿ ಇದೆ‌ 15ರಂದು ಉದ್ಘಾಟಿನೆಯಾಗಲಿದ್ದು ಕ್ರೀಡಾಂಗಣದ ನಿರ್ಮಾಣ, ಪೋಲ್ ಸ್ಥಾಪನೆಗೆ ವೇದಿಕೆ ಸಿದ್ಧವಾಗಿದೆ. ಕಾಲೇಜು ರಸ್ತೆಯ ಮುನ್ಸಿಪಲ್ ಮೈದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಕಳೆದ ಎರಡು ದಿನಗಳ ಹಿಂದೆ ಮಹಾರಾಷ್ಟ್ರ ದಿಂದ ನಾಲ್ಕು ಲಾರಿಗಳಲ್ಲಿ ಬಂದ ಧ್ವಜ ಸ್ಥಂಬದ ಪರಿಕರಗಳು ಮಧ್ಯಾನ್ಹ ಹೊಸಪೇಟೆಗೆ ತಲುಪಿದ್ದು, ಲಾರಿಗಳನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದ ಹೊಸಪೇಟೆ ಜನರು ಐತಿಹಾಸಿಕ ಕ್ಷಣಕ್ಕೆ ಉತ್ಸುಕರಾಗಿರುವುದನ್ನು ವ್ಯಕ್ತಪಡಿಸಿದರು.
ದ್ವಿಚಕ್ರ ವಾಹನಗಳ ಮೆರವಣಿಗೆ ಮೂಲಕ ಧ್ವಜ ಸ್ಥಂಭವನ್ನು ಹೊತ್ತ ಲಾರಿಗಳ ಸ್ವಾಗತ ಮಾಡಲಾಯಿತು. ಇದನ್ನು ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣ ಮಾಡುತ್ತಿದೆ.
ಇಂದು ಸಂಜೆ ಪೂಜೆ ಸಲ್ಲಿಸಿ, ಧ್ವಜ ಸ್ಥಂಭ ನಿಲ್ಲಿಸುವ ಕಾರ್ಯ ಆರಂಭವಾಗಲಿದೆ.