ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಸುಗಮ ಸಂಗೀತ ಆಯೋಜನೆ

ದಾವಣಗೆರೆ. ಜು.೨೪; ಸುವರ್ಣ ಕರ್ನಾಟಕ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕೇಂದ್ರ ಕಾರಾಗೃಹ ಸಹಯೋಗದೊಂದಿಗೆ ಸುಗಮ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಲೋಕಿಕೆರೆ ನಾಗರಾಜ್ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು. ಆ ನಂತರ ವಿಚಾರಣಾಧೀನ ಖೈದಿಗಳನ್ನು ಉದ್ದೇಶಿಸಿ ಮಾತನಾಡಿ, ಯಾವುದೋ ಸಂದರ್ಭಗಳಲ್ಲಿ ತಪ್ಪುಗಳನ್ನು ಮಾಡಿ ಬಂದು ಈ ಕಾರಾಗೃಹದಿಂದ ಮನಪರಿವರ್ತನೆ ಮಾಡಿಕೊಂಡು ಹೋಗುವುದರ ಮೂಲಕ ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷರಾದ ಸಂತೋಷ್‌ಕುಮಾರ್, ಬೆಳ್ಳೂಡಿ ಶಿವಕುಮಾರ್, ಮಾಲತೇಶ್ ವಿ.ಒಣರೊಟ್ಟಿ, ಜೈಲು ಅಧೀಕ್ಷಕರಾದ ಭಗೀರಥಿ ಎನ್., ಜೈಲರ್‌ರಾದ ಕೆ.ಎಸ್.ಮಾನ್ವಿ, ಮನೋಜ್‌ಕುಮಾರ್ ವಕೀಲರು, ಪಳನಿಸ್ವಾಮಿ, ಲಯನ್ಸ್ ಕ್ಲಬ್ ಜಿಲ್ಲಾಧ್ಯಕ್ಷರಾದ ಲ.ಎನ್.ಆರ್. ನಾಗಭೂಷಣ್‌ರಾವ್, ಶ್ರೀನಿವಾಸ್ ಎಸ್.ಪಿ., ಟಿ.ವಿ.ಮಂಜಣ್ಣ ಪೈಲ್ವಾನ್ ಹಾಗೂ ವೇದಿಕೆ ಕಾರ್ಯಕರ್ತರು, ಜೈಲಿನ ಸಿಬ್ಬಂದಿಗಳು ಮತ್ತು ಕಾರಾಗೃಹದ ಖೈದಿಗಳು ಭಾಗವಹಿಸಿದ್ದರು.