
ರಾಯಚೂರು,ಮೇ.೧೪- ಕರ್ನಾಟಕ ರಾಜ್ಯದ ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ಸಿಂಧನೂರಿನ ನೂತನ ಶಾಸಕರಾಗಿ ಆಯ್ಕೆಯಾದ ಶ್ರೀ ಹಂಪನಗೌಡ ಬಾದರ್ಲಿಯವರಿಗೆ ವನಸಿರಿ ಫೌಂಡೇಶನ್ ವತಿಯಿಂದ ಹೃದಯ ಪೂರ್ವಕ ಅಭಿನಂದನೆಗಳು ಮತ್ತು ಸಿಂಧನೂರು ಅತ್ಯಂತ ಅಭಿವೃದ್ಧಿ ಹೊಂದುತ್ತಿರುವ ತಾಲೂಕು ಇದು ಏಷ್ಯಾ ಖಂಡದಲ್ಲೇ ಹೆಸರುವಾಸಿಯಾಗಿದೆ.
ಹೆಚ್ಚು ಜನರು ವಾಸಿಸುವ ತಾಲೂಕಾಗಿದೆ ಆದರೆ ಜನರು ಜಿಲ್ಲಾ ಕೇಂದ್ರದ ಕಾರ್ಯಗಳಿಗೆ ಹೋಗಬೇಕಾದರೆ ಸುಮಾರು ನೂರಕ್ಕೂ ಹೆಚ್ಚು ಕಿಲೋಮೀಟರ್ ದೂರದ ರಾಯಚೂರಿಗೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಸಿಂಧನೂರನ್ನೇ ಜಿಲ್ಲಾಕೇಂದ್ರವನ್ನಾಗಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಇದರ ಬಗ್ಗೆ ಸಾರ್ವಜನಿಕರು ಕೂಡಾ ಹಲವಾರು ವರ್ಷಗಳಿಂದ ಸಿಂಧನೂರು ಜಿಲ್ಲಾ ಕೇಂದ್ರದ ಬಗ್ಗೆ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ ಇದೇ ವೇಳೆ ಚುನಾವಣಾ ಆಯೋಗ ೨೦೨೩ರ ಚುನಾವಣೆ ಘೋಷಿಸಿದ ಕೂಡಲೇ ಸಿಂಧನೂರಿನ ಅಭ್ಯರ್ಥಿಯಾದ ಶ್ರೀ ಹಂಪನಗೌಡ ಬಾದರ್ಲಿಯವರು ಕೂಡಾ ಸಿಂಧನೂರು ಜಿಲ್ಲಾ ಕೇಂದ್ರ ಮಾಡುವುದರ ಬಗ್ಗೆ ನಾನು ಶ್ರಮಿಸುವೆ ಎಂದು ತಿಳಿಸಿದ್ದರು ಸದ್ಯ ಇದೀಗ ಹಂಪನಗೌಡ ಬಾದರ್ಲಿ ಅವರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ ಆಯ್ಕೆಯಾದ ತಕ್ಷಣ ಮತದಾರರನ್ನು ಉದ್ದೇಶಿಸಿ ನಾನು ನಿಮಗೆ ನೀಡಿದ ಸಿಂಧನೂರು ಜಿಲ್ಲಾ ಕೇಂದ್ರದ ಮಾತನ್ನು ನಡೆಸಿಕೊಡಲು ಆದ್ಯತೆ ನೀಡುತ್ತೇನೆ ಮತ್ತು ಸಿಂಧನೂರು ಜಿಲ್ಲಾ ಕೇಂದ್ರವಾಗಿ ಮಾಡಲು ಶ್ರಮಿಸುವೇ ಎಂದಿದ್ದಾರೆ ಶಾಸಕರಾಗಿ ಮೊಟ್ಟಮೊದಲ ಬಾರಿಗೆ ಸಿಂಧನೂರು ಜಿಲ್ಲಾ ಕೇಂದ್ರ ಸ್ಥಾಪನೆ ಮಾಡುವುದರ ಬಗ್ಗೆ ಮಾತನಾಡಿದ ಮೊಟ್ಟಮೊದಲ ಮೊದಲ ಶಾಸಕರು ಹಂಪನಗೌಡ ಬಾದರ್ಲಿಯವರು ಅವರು ಅವರಿಗೆ ನಮ್ಮ ವನಸಿರಿ ಫೌಂಡೇಶನ್ ವತಿಯಿಂದ ಅಭಿನಂದನೆಗಳು ಮತ್ತು ಹೃದಯ ಪೂರ್ವಕ ದನ್ಯವಾದಗಳು ಎಂದು ಅಮರೇಗೌಡ ಮಲ್ಲಾಪೂರ ಅವರು ತಮ್ಮ ಕಛೇರಿಯಲ್ಲಿ ತಿಳಿಸಿದರು.