ಜಿಲ್ಲಾ ಕುರುಬರ ಸಮುದಾಯ ಭವನಕ್ಕೆ 3 ಕೋಟಿ ರೂ. ಅನುದಾನ : ಸಚಿವರಿಗೆ ಸನ್ಮಾನ

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಫೆ.27: ಜಿಲ್ಲಾ ಕುರುಬ ಸಂಘದ ವತಿಯಿಂದ  ಬಾಲರಾಜ್ ಅರಸ್ ರಸ್ತೆಯಲ್ಲಿರುವ ಕುರುಬರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಾಲಿನ ಬಜೆಟ್ ನಲ್ಲಿ ಮೂರು ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿ ಬಿಡುಗಡೆ ಮಾಡಿದ್ದಾರೆ.ಈ ಅನುದಾನಕ್ಕೆ ಕಾರಣೀಭೂತರಾದ,  ಶಿಕ್ಷಣ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪನವರನ್ನು ಇಂದು ಅವರ ಶಿವಮೊಗ್ಗದ ಸ್ವಗೃಹದಲ್ಲಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿ, ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಪಿ ಮೈಲಾರಪ್ಪ, ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್, ಸಮಾಜದ ರಾಜ್ಯ ಮುಖಂಡರಾದ  ಎಂ ಶ್ರೀಕಾಂತ್ , ಮಾಜಿ ಮಹಾಪೌರರಾದ ಎಸ್ .ಕೆ ಮರಿಯಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಕೆ ರಂಗನಾಥ್, ರಾಜ್ಯ ನಿರ್ದೇಶಕರಾದ ಎಸ್.ಎಂ ಶರತ್,  ಸಮಾಜದ ಮುಖಂಡರುಗಳಾದ ಎಚ್ ಪಾಲಾಕ್ಷಿ, ರಾಮಕೃಷ್ಣ ಮೂಡ್ಲಿ, ಇಕ್ಕೇರಿ ರಮೇಶ್, ಬಿಜಲಿ ಹನುಮಂತಪ್ಪ, ನವುಲೆ ಮಂಜುನಾಥ್, ಮೋಹನ್ , ರವಿ ಶಾಸ್ತ್ರಿ ಗುರುಪ್ರಸಾದ್, ಎಂ.ರಾಕೇಶ್, ಕೆ .ಎಲ್ . ಪವನ್ , ವಿನಯ್, ಹಾಗೂ ಇತರರು ಇದ್ದರು*