ಜಿಲ್ಲಾ ಕುರುಬರ ಸಂಘ – ಅಧ್ಯಕ್ಷರಾಗಿ ಕೆ.ಬಸವಂತಪ್ಪ ಆಯ್ಕೆ

ರ್ಯಾಧ್ಯಕ್ಷ ಬಿ.ಬಸವರಾಜ, ಗೌರವಾಧ್ಯಕ್ಷ ಸಂಗಣ್ಣ ಬಯ್ಯಾಪೂರು
ರಾಯಚೂರು.ನ.07- ಜಿಲ್ಲಾ ಕುರುಬರ ಸಂಘ ಅಧ್ಯಕ್ಷರಾಗಿ ಕೆ.ಬಸವಂತಪ್ಪ ಮಾನ್ವಿ, ಗೌರವಾಧ್ಯಕ್ಷರಾಗಿ ಸಂಗಣ್ಣ ಬಯ್ಯಾಪೂರು ಮತ್ತು ಕಾರ್ಯಾಧ್ಯಕ್ಷರಾಗಿ ಬಿ.ಬಸವರಾಜ ಅವರು ಆಯ್ಕೆಯಾಗಿದ್ದಾರೆ.
ನಿನ್ನೆ ಸಿಂಧನೂರು ಕನಕ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಸಭೆಯೂ ಲೋಕಸಭಾ ಮಾಜಿ ಸದಸ್ಯ ಕೆ.ವಿರುಪಾಕ್ಷಪ್ಪ ಹಾಗೂ ಕೆ.ಪಂಪಾಪತಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಗಳಾಗಿ ಎಂ.ದೊಡ್ಡ ಬಸವರಾಜ ಸಿಂಧನೂರು, ಉಪಾಧ್ಯಕ್ಷರಾಗಿ ಹನುಮಂತಪ್ಪ ಕಂದಗಲ್, ಬೇವಿನ್ ಬೂದಪ್ಪ ಕಲ್ಮಲಾ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಸಿದ್ದಣ್ಣ ಗಣೇಕಲ್, ಖಜಾಂಚಿಯಾಗಿ ಶಿವಣ್ಣ ವಕೀಲರು ಕವಿತಾಳ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಭೆಯಲ್ಲಿ ಸಿದ್ದಣ್ಣ ತಾತಾ, ಲಕ್ಷ್ಮಣ ತಾತಾ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷರಾದ ಮಿರ್ಜಾಪೂರು ಮಹಾದೇವಪ್ಪ, ನಿರ್ದೇಶಕರಾದ ಈರಣ್ಣ ಮಾನ್ವಿ, ನೀಲಕಂಠ ಬೇವಿನ್, ಕಸ್ತೂರಮ್ಮ ಬೀರಪ್ಪ ಕಡದಿನ್ನಿ, ಹನುಮಂತಪ್ಪ ಜಾಲಿಬೆಂಚಿ, ಮಾಸದೊಡ್ಡಿ ನರಸಿಂಹಲು, ನಾಗರಾಜ, ರಾಮನಗೌಡ, ಲಿಂಗಪ್ಪ ಪೂಜಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.