ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ

ದಾವಣಗೆರೆ.ಆ.೨: ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಪತ್ರಕರ್ತರ ಮೇಲೆ ನಡೆಸಿರುವ ಹಲ್ಲೆ ಖಂಡಿಸಿ  ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿದರು.ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ್ ಏಕಬೋಟೆ ಮಾತನಾಡಿ, ಕೋಲಾರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ವರದಿ ಮಾಡಲು ಹೋಗಿದ್ದ ಕನ್ನಡ ಪ್ರಭ ಮತ್ತು ಸಂಯುಕ್ತ ಕರ್ನಾಟಕದ ವರದಿಗಾರರ ಮೇಲೆ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಹಲ್ಲೆ ಮಾಡಿರುವುದನ್ನು ಸಂಘ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದರು.ಪ್ರಧಾನ ಕಾರ್‍ಯದರ್ಶಿ ಎ.ಫಕೃದ್ಧೀನ್ ಮಾತನಾಡಿ, ರಮೇಶ್ ಕುಮಾರ್ ರಾಜಕಾರಣದಲ್ಲಿ ಅನುಭವವಿ. ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ಕೂಡಲೇ ಅವರು ಕ್ಷಮೆಯಾಚಿಸಬೇಕು. ಮುಖ್ಯಮಂತ್ರಿಗಳು ಅವರ ಮೇಲೆ ಕಾನೂನು ಶಿಸ್ತುಕ್ರಮಕ್ಕೆ ಮುಂದಾಗಬೇಕು. ಪದೆ ಪದೇ ಪತ್ರಕರ್ತರ ಮೇಲೆ ಹಲ್ಲೆ ನಡೆಯುತ್ತಿದ್ದು, ಇದರ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಿ ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರುಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಕಾರ್‍ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಎನ್. ಪ್ರಕಾಶ್, ಕಾರ್‍ಯದರ್ಶಿ ಜೆ.ಎಸ್.ವೀರೇಶ್, ನಿಂಗೋಜಿರಾವ್, ಖಜಾಂಚಿ ಎನ್.ವಿ. ಬದರಿನಾಥ್, ಸಿ.ವೇದಮೂರ್ತಿ, ಇಂದೂಧರ ನಿಶಾನಿಮಠ್, ಕೃಷ್ಣೋಜಿರಾವ್, ಬಿ.ಎಸ್. ಮುದ್ದಯ್ಯ, ಎಸ್.ಕೆ. ಒಡೆಯರ್, ವಿಜಯಜಾಧವ್, ಎಚ್. ಭಾರತಿ, ಪತ್ರಿಕಾ ವಿತರಕ ಎ. ಕೃಷ್ಣಮೂರ್ತಿ ಇತರರು ಇದ್ದರು.

Attachments area