ಜಿಲ್ಲಾ ಕಾರ್ಯಕಾರಿಣಿ ಸಭೆ: ಐಡಿ ಕಾರ್ಡ್ ವಿತರಣೆ

ಬೀದರ್:ಜೂ.5: ನಗರದ ಹೃದಯಭಾಗದಲ್ಲಿರುವ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಜಿಲ್ಲಾ ಕಾರ್ಯಕಾರಿಣಿ ಸಭೆ ಜರುಗಿತು.
ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿಗಳಾದ ಭವಾನಿಸಿಂಗ್ ಠಾಕೂರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ನೂತನ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ನೇತೃತ್ವದಲ್ಲಿ ಒಳ್ಳೆಯ ಕಾರ್ಯಗಳಾಗುತ್ತಿದ್ದು, ಶ್ಲಾಘನಿಯ. ಎಲ್ಲ ಸದಸ್ಯರು ತಮ್ಮಲ್ಲಿನ ವಯಕ್ತಿಕ ಭಿನ್ನಾಭಿಪ್ರಾಯ ಬದಿಗೊತ್ತಿ ಸಂಘದ ಉನ್ನತಿಗೆ ಒಟ್ಟಾಗಿ ಪರಿಶ್ರಮಿಸಬೇಕಿದೆ ಎಂದರು. ಸಂಘದ ಜಿಲ್ಲಾ ಅಧ್ಯಕ್ಷ ಡಿ.ಕೆ ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ಎಲ್ಲ ಅರ್ಹ ಪತ್ರಕರ್ತರಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಇದರಿಂದ ನಕಲಿ ಪತ್ರಕರ್ತರ ಹಾವಳಿ ತಡೆಯುವ ಉದ್ದೇಶ ಹೊಂದಿದ್ದೇವೆ. ಸಂಘದ ಸದಸ್ಯರು ಇದರ ಸದುಪಯೊಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ಸಭೆಯಲ್ಲಿ ರಾಜ್ಯ ಪ್ರತಿನಿಧಿ ಬಸವರಾಜ ಕಾಮಶೆಟ್ಟಿ, ಕಲಬುರಗಿ ಜಿಲ್ಲಾ ಉಪಾಧ್ಯಕ್ಷ ದೇವೇಂದ್ರಪ್ಪ ಆವಂಟಿ, ಸ್ಥಳಿಯ ಉಪಾಧ್ಯಕ್ಷ ಶ್ರೀನಿವಾಸ ಚೌದ್ರಿ, ಕಾರ್ಯದರ್ಶಿ ಪ್ರಥ್ವಿರಾಜ, ಸುನಿಲ ಕುಲಕರ್ಣಿ, ಶ್ರೀಕಾಂತ ಬಿರಾದಾರ, ಖಜಾಂಚಿ ಎಂ.ಪಿ ಮುದಾಳೆ, ಹಿರಿಯ ಪತ್ರಕರ್ತರಾದ ವಿಜಯಕುಮಾರ ಪರ್ಮಾ, ಚಂದ್ರಕಾಂತ ಪಾಟೀಲ, ಅಬ್ದುಲ್ ಅಲಿ, ವಿಜಯಕುಮಾರ ಪಾಟೀಲ, ಅಬ್ದುಲ್ ಖದೀರ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಇತರೆ ಸದಸ್ಯರು, ಸ್ಥಳಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ 2023-24 ನೇ ಸಾಲಿನ ಸಂಘದ ಐಡಿ ಕಾರ್ಡ್ ಗಳನ್ನು ವಿತರಿಸಲಾಯಿತು. ಇತ್ತಿಚೀಗೆ ಒರಿಸ್ಸಾ ರೈಲು ದುರಂತದಲ್ಲಿ ಅಪಘಾತಕ್ಕೀಡಾದವರಿಗಾಗಿ ಮೌನ ಆಚರಿಸಲಾಯಿತು.