ಜಿಲ್ಲಾ ಕಾರ್ಮಿಕರ ಸಮಾವೇಶ ಪೆÇೀಸ್ಟರ್ ಬಿಡುಗಡೆ

ಶಹಾಪುರ :ಮಾ.4: ರಾಜ್ಯದಲ್ಲಿ 40 ಲಕ್ಷ ಕಟ್ಟಡ ಕಾರ್ಮಿಕರು.85 ಲಕ್ಷ ಅಸಂಘಟಿತ ಕಾರ್ಮಿಕರ ನೋಂದಾವಣೆಯಾಗಿದ್ದು ಕಾರ್ಮಿಕರಿಗೆ ಸರಕಾರ ಸರಿಯಾದ ಸೌಲಭ್ಯ ನೀಡುತ್ತಿಲ್ಲ ಎಂದು ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ದೇವರಾಜ ಸರಕಾರದ ವಿರುದ್ಧ ಕಿಡಿಕಾರಿದರು.ನಗರದ ವಾಲ್ಮೀಕಿ ವೃತ್ತದ ಪ್ರವಾಸಿ ಮಂದಿರದಲ್ಲಿ ಭಾನುವಾರ ಬೆಳಗ್ಗೆ 11ಕ್ಕೆ ಸಿಪಿಎಸ್ ಶಾಲಾ ಮೈದಾನದಲ್ಲಿ ನಡೆಯುವ ಜಿಲ್ಲಾ ಕಾರ್ಮಿಕ ಪೆÇೀಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸರಕಾರವು ಕಾರ್ಮಿಕರಿಗೆ ಆರೋಗ್ಯ ಶಿಕ್ಷಣಕ್ಕೆ ಸರಿಯಾಗಿ ಒತ್ತು ನೀಡುತ್ತಿಲ್ಲ. ವಸತಿ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಸ್ವಂತ ನಿವೇಶನ ಇದ್ದವರಿಗೆ 5 ಲಕ್ಷ ರೂ ಕಾರ್ಮಿಕ ಇಲಾಖೆಯಿಂದ ನೇರವಾಗಿ ಬಿಡುಗಡೆ ಮಾಡಬೇಕು, ಕಾರ್ಮಿಕರಿಗಾಗಿ ಕಾರ್ಮಿಕ ಸಮುದಾಯ ಭವನಗಳನ್ನು ಪ್ರತಿ ಜಿಲ್ಲೆಯಲ್ಲಿ ನಿರ್ಮಿಸಬೇಕು. ಜಿಲ್ಲೆಗೊಂದರಂತೆ ? ಎಂ ಎಸ್ ಆಯಿ ಆಸ್ಪತ್ರೆಯನ್ನು ಕಾರ್ಮಿಕರಿಗಾಗಿ ಕಟ್ಟಿಸಿಕೊಡಬೇಕು. ಸರ್ಕಾರ ಪ್ರತಿ ಬಜೆಟ್ ನಲ್ಲಿ 5 ಸಾವಿರ ಕೋಟಿ ಕಾರ್ಮಿಕ ನಿಧಿ ಮೀಸಲಿಡಬೇಕು ಎಂದು ಹೇಳಿದರು. ಕಾರ್ಮಿಕರು ಅನಾರೋಗ್ಯದ ತೊಂದರೆಗೆ ಒಳಪಟ್ಟಿದೆಕಾರ್ಮಿಕರಿಗೆ ಲೇಬರ್ ಕಾರ್ಡನ್ನು ಗುರುತಿಸಿ ಕಾನೂನುಚೌಕಟ್ಟಿನಲ್ಲಿ ಐದು ಲಕ ರೂಪಾಯಿ ಆರೋಗ್ಯ ಕ್ಲೇಮ್‍ಹಣವನ್ನು ಬಿಡುಗಡೆಗೊಳಿಸಬೇಕು ಎಂದು ಹೇಳಿದರು.
ಯಾದಗಿರಿ ಜಿಲ್ಲೆಯಲ್ಲಿ ನೋಂದಾವಣಿಯಾಗಿದ್ದು, 70,000 ಕಾರ್ಮಿಕರು ಮುಂದಿನ
ಚುನಾವಣೆಯಲ್ಲಿ ರಾಜ್ಯದ ಪ್ರತಿ ಕ್ಷೇತ್ರದಲ್ಲಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ. ನಾವು ಗೆಲ್ಲದಿದ್ದರೂ ಪರವಾಗಿಲ್ಲ, ಎದುರಾಳಿಯನ್ನು ಕಾರ್ಮಿಕರಿಗಿದೆ ಎಂದರು. ಸೋಲಿಸುವ ಶಕ್ತಿ
ನಾಳಿನ ಕಾರ್ಯಕ್ರಮದಲ್ಲಿ 5,000 ಕಾರ್ಮಿಕರು ಪಾಲ್ಗೊಳ್ಳುವ ನೀರಿಕ್ಷೆ ಇದೆ.ಹಿರಿಯ ಕಾರ್ಮಿಕರಿಗೆ ಗೌರವ ಕಾರ್ಮಿಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಕಾರ್ಮಿಕ ಮಕ್ಕಳಿಗೆ 2022ನೇ ಸಾಲಿನ 10ನೇ ಮತ್ತು ಪಿಯುಸಿ ಪರೀಕ್ಷೆಯಲ್ಲಿ 85 ಅಂಕಗಳಿಸಿದ ವಿದ್ಯಾರ್ಥಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.ಉಚಿತವಾಗಿ ಇ-ಶಮ ಕಾರ್ಡ್,ಆಯುಷ್ಮಾನ್ ಕಾರ್ಡ್ ಮಾಡಿಕೊಡಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಒಕ್ಕೂಟದ ಕಾರ್ಯಾಧ್ಯಕ್ಷರಾದ ಶ್ರೀನಿವಾಸ್ ಜಿಲ್ಲಾಧ್ಯಕ್ಷರಾದ ಚಾಂದಪಾಷ ವಡಗೇರ, ಗೌರವಾಧ್ಯಕ್ಷರಾದ ದೇವೇಂದ್ರಪ್ಪ ಕನ್ಯಾಕೊಳೂರು, ಬಸವರಾಜ ನಗನೂರು,ಪರ್ವತರೆಡ್ಡಿ ವಿಭೂತಿಹಳ್ಳಿ,ಮೌನೇಶ್ ಹಳಿಸಗರ ಸೇರಿದಂತೆ ಇತರರು ಇದ್ದರು.
ಕಾರ್ಮಿಕರ ಬೇಡಿಕೆಗಳು.* ಎಲ್ಲ ವರ್ಗದ ಕಾರ್ಮಿಕರಿಗೆ ರಾಜ್ಯದ ಬಜೆಟ್ ನಲ್ಲಿ 15,000 ಕೋ. ಪ್ರತ್ಯೇಕವಾಗಿ ಕಾರ್ಮಿಕರಿಗೆ ಮೀಸಲಿಡಬೇಕು.* ಜಿಲ್ಲೆಗೊಂದರಂತೆ ಇಎಂ ಎಸ್ ಆಸ್ಪತ್ರೆ ನಿರ್ಮಾಣ• 09556 ಕೊ.ಮೀಸಲಾದ ಕಾರ್ಮಿಕರ ಹಣವನ್ನು ಕಾರ್ಮಿಕರಿಗಾಗಿಯೇ ಖರ್ಚು ಮಾಡಬೇಕು.ಕಾರ್ಮಿಕರಿಗೆ ಕೆಎಎಸ್, ಐಎಎಸ್ ತರಬೇತಿ ಕೇಂದ್ರಗಳನ್ನು ತೆಗೆಯಬೇಕು.ಕಾರ್ಮಿಕರಿಗೆ ಲೇಬರ್ ಕಾರ್ಡನ್ನು ಗುರುತಿಸಿ ಲಕ್ಷ ರೂ, ಆರೋಗ್ಯ ಕೈಮ್ ಹಣವನ್ನು ಬಿಡುಗಡೆಗೊಳಿಸಬೇಕು.

  • ಕಾರ್ಮಿಕರಿಗೆ ವಸತಿ ಯೋಜನೆಯಡಿಯಲ್ಲಿ ಸ್ವಂತ ಜಾಗವಿದ್ದಲ್ಲಿ ಐದು ಲಕ್ಷ ಹಣವನ್ನು ಕಾರ್ಮಿಕ ಇಲಾಖೆಯಿಂದ ನೇರವಾಗಿ ಕಾರ್ಮಿಕರಿಗೆ ನೀಡಬೇಕು.