
(ಸಂಜೆವಾಣಿ ವಾರ್ತೆ)
ವಿಜಯಪುರ:ಸೆ.8: ಎ.ಐ.ಸಿ.ಸಿ. ಮಾಜಿ ಅಧ್ಯಕ್ಷರಾದ ರಾಹುಲ ಗಾಂಧಿ ರವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಭಾರತ ಜೋಡೋ ಯಾತ್ರೆಯು ಒಂದು ವರ್ಷ ತುಂಬಿದ ನಿಮಿತ್ತ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ವರ್ಷಾಚರಣೆಯನ್ನು ನಗರದ ಮಹಾತ್ಮಾ ಗಾಂಧಿ ವೃತ್ತದಿಂದ ಪ್ರಾರಂಭಿಸಿ ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಕನಕದಾಸ ವೃತ್ತದವರೆಗೆ ರ್ಯಾಲಿಯನ್ನು ಹಮ್ಮಿಕೊಳ್ಳಲಾಯಿತು.
ರ್ಯಾಲಿಯ ನೇತೃತ್ವ ವಹಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರಾಜು ಆಲಗೂರ ರವರು ಮಾತನಾಡಿ ಕೋಮುವಾದವನ್ನು, ಮನುವಾದವನ್ನು ಅಳಿಸಿ ಸರ್ವ ಧರ್ಮ ಜನಾಂಗಗಳ ಮನಸ್ಸುಗಳನ್ನು ಒಂದು ಗೂಡಿಸುವುದು, ಭಾತೃತ್ವ ಬೆಳೆಸುವ ಉದ್ದೇಶದಿಂದ ಭಾರತ ಜೋಡೋ ಯಾತ್ರೆಯನ್ನು ಒಂದು ವರ್ಷದ ಹಿಂದೆ ಹಮ್ಮಿಕೊಳ್ಳಲಾಗಿತ್ತು. ಈ ಭಾರತ ಜೋಡೋ ಯಾತ್ರೆಯು ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ರ್ಯಾಲಿಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. ರ್ಯಾಲಿಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಪಕ್ಷದ ಮುಖಂಡರುಗಳಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಈ ರ್ಯಾಲಿಯನ್ನು ಉದ್ದೇಶಿಸಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್‍ಹಮೀದ ಮುಶ್ರೀಫ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಭಾಸ ಛಾಯಾಗೋಳ, ಮಹ್ಮದ ರಫೀಕ ಟಪಾಲ, ಅಬ್ದುಲ್‍ರಜಾಕ ಹೊರ್ತಿ, ರಮೇಶ ಗುಬ್ಬೇವಾಡ, ಆಜಾದ ಪಟೇಲ, ಮಹಾದೇವಿ ಗೋಕಾಕ, ಜಮೀರಅಹ್ಮದ ಬಕ್ಷಿ, ಸಾಹೇಬಗೌಡ ಬಿರಾದಾರ, ರಾಕೇಶ ಕಲ್ಲೂರ, ಡಾ.ಪ್ರಭುಗೌಡ ಪಾಟೀಲ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಇಲಿಯಾಸ ಬೋರಾಮಣಿ, ಅಫ್ಜಲ್ ಜಾನವೆಕರ, ವಿಶ್ವನಾಥ ಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರತಿ ಶಹಾಪೂರ, ಬಾಳನಗೌಡ ಪಾಟೀಲ, ಶಹಾಜಾನ್ ಮುಲ್ಲಾ, ಜಾವೀದ ಮೋಮಿನ್, ಸಿದ್ದನಗೌಡ ಗೌಡನ್ನವರ, ಸುರೇಶ ಹಾರಿವಾಳ, ರಫೀಕ ಪಕಾಲೆ, ಆರ್.ಡಿ. ಹಕ್ಕೆ, ಬಶೀರಅಹ್ಮದ ಕಸಾಬ, ಜಿಲ್ಲಾ ಖಜಾಂಚಿ ವಿಜಯಕುಮಾರ ಘಾಟಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಚನಬಸಪ್ಪ ನಂದರಗಿ, ಅಸ್ಫಾಕ ಮನಗೂಳಿ, ಶರಣಪ್ಪ ಯಕ್ಕುಂಡಿ, ಪ್ರಶಾಂತ ಕಾಳೆ, ಹಾಜಿಲಾಲ ದಳವಾಯಿ, ಬಿ,ಎಸ್. ಬ್ಯಾಳಿ, ಸಾಹೇಬಗೌಡ ಬಿರಾದಾರ ತದ್ದೇವಾಡಿ, ಅಂಗಘಟಕಗಳ ಅಧ್ಯಕ್ಷರಾದ ಸಣ್ಣಪ್ಪ ತಳವಾರ, ನಿಂಗಪ್ಪ ಸಂಗಾಪೂರ, ಅಮಿತ ಚವ್ಹಾಣ, ಬಾಪುಗೌಡ ಪಾಟೀಲ ವಡವಡಗಿ, ಆನಂದ ಜಾಧವ, ಮಹ್ಮದಹನೀಫ್ ಮಕಾನದಾರ, ಎಂ.ಬಿ. ಮೇಡೆಗಾರ, ಲಾಲಸಾಬ ಕೊರಬು, ಪಯಾಜ ಕಲಾದಗಿ, ಸುಭಾಷ ತಳಕೇರಿ, ಶಹಾಜಾನ್ ದುಂಡಸಿ, ಮೀರಾಸಾಬ ಮುಲ್ಲಾ, ಮಹಾನಗರ ಪಾಲಿಕೆ ಸದಸ್ಯರಾದ ಅಪ್ಪು ಪೂಜಾರಿ, ಶಫೀಕ ಮನಗೂಳಿ, ಬಂದೆನವಾಜ ಬೀಳಗಿ, ಆಸಿಫ್ ಶಾನವಾಲೆ, ರಾಜು ಜಾಧವ, ಅಫ್ತಾಬ ಖಾದ್ರಿ ಇನಾಮದಾರ, ಅಬ್ದುಲ್‍ಖಾದಿರ ಖಾದಿಮ, ಫಿರೋಜ ಶೇಖ, ಪ್ರಕಾಶ ಕಟ್ಟಿಮನಿ, ಕೃಷ್ಣಾ ಲಮಾಣಿ, ಸೈಫನ್ ಡಾಂಗೆ, ಅಂಬಣ್ಣ ಕಲಮನಿ, ಇಲಿಯಾಸಅಹ್ಮದ ಸಿದ್ದಿಕಿ, ಭಾರತಿ ಹೊಸಮನಿ, ಸ್ನೇಹಾ ಶೆಟ್ಟಿ, ಕಾಶಿಬಾಯಿ ಹಡಪದ, ಮಂಜುಳಾ ಜಾಧವ, ಮಂಜುಳಾ ಗಾಯಕವಾಡ, ಆಸ್ಮಾ ಕಾಲೆಬಾಗ, ಶಮಿಮಾ ಅಕ್ಕಲಕೋಟ, ಮುಸ್ಕಾನ ಶಿವಣಗಿ, ಲಕ್ಷ್ಮಿ ಬಳ್ಳಾರಿ, ಕಸ್ತೂರಿ ಪೂಜಾರಿ, ಹಮಿದಾ ಪಟೇಲ, ರುಕ್ಮಿಣಿ ಲಮಾಣಿ, ವರ್ಷಾ ಭೋವಿ, ಎಂ.ಎ. ಬಕ್ಷಿ, ಪರಶುರಾಮ ಹೊಸಮನಿ, ಸಂತೋಷ ಬಾಲಗಾಂವಿ, ಮಲ್ಲು ಗಬಸಾವಳಗಿ, ಅಲ್ಲಾಬಕ್ಷ ಬಡೇಗರ, ಖಲೀಲ ಲೋಣಿ, ಎ.ಆರ್. ಕಂಬಾಗಿ, ಈರಪ್ಪ ಕುಂಬಾರ, ಮೈನುದ್ದೀನ ಬೀಳಗಿ, ಮಂಜುನಾಥ ನಿಡೋಣಿ, ಅಕ್ಬರ ನಾಯಕ, ಪ್ರಕಾಶ ಗುಣದಾಳ, ಸೈದು ಕೊಡಹೊನ್ನ, ಅನಿಲಕುಮಾರ ಯರನಾಳ, ದಸ್ತಗೀರ ಸಾಲೋಟಗಿ, ಮಹಾದೇವ ರಾವಜಿ, ಆಬಿದ ಸಂಗಮ, ರಜಾಕ ಕಾಖಂಡಕಿ, ರಮಜಾನ ಹೆಬ್ಬಾಳ ಮುಂತಾದವರು ಪಾಲ್ಗೊಂಡಿದ್ದರು.