ಜಿಲ್ಲಾ ಕಾಂಗ್ರೆಸ್‍ನಿಂದ ಶ್ರೀರಾಮನವಮಿ

ದಾವಣಗೆರೆ.ಏ.೨೨;  ಜಿಲ್ಲಾ ಕಾಂಗ್ರೆಸ್ ವತಿಯಿಂದ ಶ್ರೀರಾಮ ನವಮಿಯನ್ನು ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಮುಖಂಡರುಗಳಾದ ಪೇಪರ್ ಚಂದ್ರಣ್ಣ, ಅಜ್ಜಪ್ಪ ಪವಾರ್, ಬೆಳ್ಳೂಡಿ ಮಂಜುನಾಥ್, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಎಸ್.ರವಿ, ಶ್ರೀಕಾಂತ್ ಬಗರೆ, ಗೋಪಾಲ್, ಪಂಚಪ್ಪ ತೆರದಾಳ್, ಅಜಿತ್ ಆಲೂರು, ಸತೀಶ್ ಶೆಟ್ಟಿ ಮತ್ತಿತರರಿದ್ದರು.