ಜಿಲ್ಲಾ ಕಾಂಗ್ರೆಸ್‌ನಿದ ದೇವರಾಜ ಅರಸು ಪುಣ್ಯಸ್ಮರಣೆ

ದಾವಣಗೆರೆ.ಜೂ.೭: ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಪುಣ್ಯಸ್ಮರಣೆಯನ್ನು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಗೃಹ ಕಛೇರಿ ಶಿವಪಾರ್ವತಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ 8 ವರುಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ಸಮಪಾಲು ಸಮಬಾಳು ತತ್ವದಡಿ ಆಡಳಿತ ನಡೆಸಿ ಎಲ್ಲಾ ವರ್ಗದ ಜನತೆಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದರು ಎಂದು ಸ್ಮರಿಸಿದರು.ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು. 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಸಾಮಾಜಿಕ ನ್ಯಾಯವನ್ನು ಮುಂದುವರೆಸಿಕೊಂಡು ಹೋದ ಮಹನೀಯರು. ಅವರು ಮುಖ್ಯಮಂತ್ರಿಯಾದಂತ ಸಂದರ್ಭದಲ್ಲಿ ಜೀತಪದ್ದತಿ, ಉಳುವವನೆ ಭೂಮಿ ಒಡೆಯ ಎಂಬ ಕ್ರಾಂತಿಕಾರಿಕ ಮಸೂದೆಯನ್ನು ಜಾರಿ ಮಾಡಿದ್ದರು. ತಮ್ಮ ಜಮೀನನ್ನು ಸಹ ಹೂಳುವವನಿಗೆ ನೀಡುವ ಮೂಲಕ ಮಾದರಿಯಾಗಿದ್ದರು. ದಾವಣಗೆರೆಯಲ್ಲಿ ಡಾ. ಶಾಮನೂರು ಶಿವಶಂಕರಪ್ಪನವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದರು.ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಮಾತನಾಡಿ ಉಳುವವನೆ ಭೂಮಿ ಒಡೆಯ ಎಂಬ ಕ್ರಾಂತಿಕಾರಿಕ ಮಸೂದೆಯನ್ನು ಜಾರಿ ಮಾಡುವ ಮೂಲಕ ಈ ರಾಜ್ಯದ ಗೆಣಿದಾರರ ವಿರೋಧ ಕಟ್ಟಿಕೊಂಡರು ಸಹ ಬಡವರ ಪರವಾಗಿ ನಿಂತ ಧೀಮಂತ ವ್ಯಕ್ತಿ ಅರಸು ಅವರು ಎಂದರು. ಮಹಾನಗರ ಪಾಲಿಕೆ ಸದಸ್ಯ ಚಮನ್ ಸಾಬ್ ಮಾತನಾಡಿ ಶೋಷಿತ ಸಮುದಾಯಕ್ಕೆ ನ್ಯಾಯ ಕಲ್ಪಿಸಿದ ಮೊದಲ ಮುಖ್ಯಮಂತ್ರಿ ಎಂದರೆ ಅದು ದೇವರಾಜು ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ಸಾಗುವಳಿದಾರರಿಗೆ ಜಮೀನು ನೀಡುವಂತಹ ಮಹತ್ವಾಕಾಂಕ್ಷೆ ಯೋಜನೆಯನ್ನು ಜಾರಿಗೆ ತಂದರು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರುಗಳಾದ ಜಾಕೀರ್, ಸೈಯದ್ ಚಾರ್ಲಿ, ಉದಯ್ ಕುಮಾರ್, ಶಫೀಖ್ ಪಂಡಿತ್, ಸಿಮೇಎಣ್ಣೆ ಪರಮೇಶ್, ಕೊಡಪಾನ ದಾದಾಪೀರ್, ಲಾಲ್ ಆರೀಫ್, ಶಾಮನೂರು ಕುಮಾರ್, ಹರೀಶ್ ಕೆ.ಎಲ್. ಬಸಾಪುರ, ಮೊಟ್ಟೆ ದಾದಾಪೀರ್ ಮತ್ತಿತರರಿದ್ದರು.