ಜಿಲ್ಲಾ ಕಾಂಗ್ರೆಸ್‌ನಿಂದ ದಿ. ಬಿ.ಬಸವಲಿಂಗಪ್ಪನವರ ಜನ್ಮದಿನಾಚರಣೆ

ದಾವಣಗೆರೆ.ಏ.೨೨;  ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಮಂತ್ರಿಗಳಾದ ದಿ. ಬಿ.ಬಸವಲಿಂಗಪ್ಪನವರ 100ನೇ ವರ್ಷದ ಜನ್ಮದಿನವನ್ನು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯಿತು.
ಕೆಪಿಸಿಸಿ ವಕ್ತಾರರಾದ ಡಿ.ಬಸವರಾಜ್ ಮತ್ತು ಕಾಂಗ್ರೆಸ್ ಮುಖಂಡ ರಾಮಯ್ಯ ಮಾತನಾಡಿ ನೇರ, ನಿಷ್ಠೂರವಾದಿಯಾಗಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಹಾದಿಯನ್ನು ತುಳಿದು ಕರ್ನಾಟಕದ ಅಂಬೇಡ್ಕರ್ ಎಂದೇ ಪ್ರಸಿದ್ದಿಯಾಗಿದ್ದ ಬಿ.ಬಸವಲಿಂಗಪ್ಪನವರು ಓದುವ ಸಂದರ್ಭದಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಅಂಬೇಡ್ಕರ್ ಚಿಂತನೆಗಳ ಪ್ರೇರಣೆಯಿಂದ ಓದು-ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ದೇಸಿ ಸಾಹಿತ್ಯದಿಂದ ಹಿಡಿದು ವಿಶ್ವಸಾಹಿತ್ಯದ ವರೆಗೆ ಅಧ್ಯಯನ ನಡೆಸಿ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡಿದ್ದರು ಎಂದರು.
ಅರಸು ಅವರ ಸಚಿವ ಸಂಪುಟದಲ್ಲಿ ಬಿ.ಬಸವಲಿಂಗಪ್ಪ ಅವರು ಪೌರಾಡಳಿತ ಮಂತ್ರಿಯಾಗಿ ಮಲ ಹೊರುವ ಪದ್ಧತಿಯ ನಿರ್ಮೂಲನೆಗಾಗಿ ಐತಿಹಾಸಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅರಸು ಕಾಲದಲ್ಲಿ ಬಿ.ಬಸವಲಿಂಗಪ್ಪ ಅವರು ಇರಿಸಿದ ಈ ಮಾನವ ಘನತೆಯ ಹೆಜ್ಜೆಯು ಇಡೀ ಭಾರತದಲ್ಲಿ ಅಭೂತಪೂರ್ವ ವಿದ್ಯಮಾನವಾಯಿತು. 
ಭೂಸುದಾರಣೆ ಕಾನೂನು, ಭೂಮಿತಿ ಕಾನೂನು, ಭೂರಹಿತರಿಗೆ ಭೂಮಿ ಹಂಚಿಕೆ ಕಾನೂನು, ಪರಿಶಿಷ್ಟರ ಭೂಮಿ ಪರಭಾರೆ ರದ್ಧತಿ ಕಾನೂನು ಹೀಗೆ ಹಲವಾರು ಜನಪರ ಕಾನೂನುಗಳನ್ನು ಜಾರಿಗೆ ತಂದರು. ಅಲ್ಲದೆ, ಜೀತಪದ್ಧತಿಯನ್ನ ನಿರ್ನಾಮಗೊಳಿಸುವ ಮರುವಸತಿ ಮೊದಲಾದ ದಿಟ್ಟ ಯೋಜನೆಗಳನ್ನೂ ಜಾರಿಗೊಳಿಸಿದರು. ಹೀಗೆ ಬಿ.ಬಸವಲಿಂಗಪ್ಪ ಅವರು ಯಾವ ಇಲಾಖೆಯನ್ನೇ ವಹಿಸಿಕೊಂಡು ಕೆಲಸ ಮಾಡಿದರು ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ, ಕಿಸಾನ್ ಕಾಂಗ್ರೆಸ್‌ನ ಹಾಲೇಶ್ ಬಸವನಾಳ್, ಎಸ್.ರವಿಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್‌ನ ದ್ರಾಕ್ಷಾಯಣಮ್ಮ, ರಾಜೇಶ್ವರಿ, ಮೇಘನಾ, ಮಂಜುನಾಥ್, ಸೈಯದ್ ಜಿಕ್ರಿಯಾ, ಮಹ್ಮದ್ ಬಾಷಾ, ವೀರಭದ್ರಪ್ಪ ಮತ್ತಿತರರಿದ್ದರು.