ಜಿಲ್ಲಾ ಕಾಂಗ್ರೆಸ್‌ನಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

ದಾವಣಗೆರೆ‌ಜ.೧೩ : ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚರಣೆವನ್ನು ಜಿಲ್ಲಾ ಕಾಂಗ್ರೆಸ್ ಕಛೇರಿಯ ಶಾಮನೂರು ಶಿವಶಂಖರಪ್ಪನವರ ಸಭಾಭವನದಲ್ಲಿ ಆಚರಿಸಲಾಯಿತು.ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಮಾತನಾಡಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಪ್ರಚಾರಕರಾದರೂ ಸಹ ವಿದೇಶಗಳಲ್ಲಿ ಹಿಂದೂ ಧರ್ಮಕ್ಕಿಂತ ಭಾರತ ದೇಶದ ಸಂಸ್ಕೃತಿ, ಸಂಸ್ಕಾರವನ್ನು ತೋರ್ಪಡಿಸಿಕೊಟ್ಟರು ಎಂದರು.ಸರ್ವೇ ಜನೋ ಸುಖಿನೋ ಭವಃತು ಎಂದು ಹೇಳುವ ಹಿಂದೂ ಧರ್ಮವನ್ನು ಪ್ರಚಾರ ನಡೆಸಿ ಭಾರತೀಯತೆಯನ್ನು ಎತ್ತಿಹಿಡಿದವರು ವಿವೇಕಾನಂದರಾದರೆ, ಅನ್ಯ ಧರ್ಮವನ್ನು ದ್ವೇಷಿಸುವುದೇ ಬಿಜೆಪಿ ಹಿಂದುತ್ವ ಆಗಿದೆ. ವಿವೇಕಾನಂದರ ಹಿಂದುತ್ವವನ್ನು ತಮ್ಮ ಪಕ್ಷದ ಸ್ವಾರ್ಥಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ದೂರಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಂತಹ ದೇಶದಲ್ಲಿ ಧರ್ಮ-ಜಾತಿ ಮಧ್ಯೆ ದ್ವೇಷ ಬಿತ್ತಿ ಶಾಂತಿಯ ದೇಶವನ್ನು ದ್ವೇಷದ ದೇಶವನ್ನಾಗಿ ಬಿಜೆಪಿ ಮಾಡಲು ಹೊರಟಿದೆ ಎಂದು ಆರೋಪಿಸಿದರು.ಸಾಮಾಜಿಕ ಜಾಲತಾಣದ ಹರೀಶ್ ಕೆ.ಎಲ್.ಬಸಾಪುರ ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿದ ವಿವೇಕಾನಂದರು ದೇಶದ ಜಾತಿ ವ್ಯವಸ್ಥೆಯನ್ನು ಅಳಿಸಬೇಕೆಂಬ ಸಂಕಲ್ಪ ಹೊಂದಿದ್ದರು. ಅಂತಹವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಜಾತಿ-ಧರ್ಮದಡಿ ರಾಜಕೀಯ ಮಾಡುತ್ತಿದೆ ಎಂದು ದೂರಿದರು.ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಶ್ರೀಮತಿ ದ್ರಾಕ್ಷಾಯಣಮ್ಮ, ಶ್ರೀಮತಿ ರಾಜೇಶ್ವರಿ, ಮಹ್ಮದ್ ಜಿಕ್ರಿಯಾ, ಸುರೇಶ ಜಾಧವ್, ಅಲಿ ರೆಹಮತ್ ಮತ್ತಿತರರಿದ್ದರು.