
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೧: ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಮಂತ್ರಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮದಿನವನ್ನು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ ರಾಜೀವ್‌ಗಾಂಧಿಯವರಿಗೆ ಪ್ರಜಾಪ್ರಭುತ್ವದಲ್ಲಿ ಅಪಾರ ನಂಬಿಕೆ ಇತ್ತು. ಸಮಾಜದ ಎಲ್ಲಾ ವರ್ಗದವರು ಎಲ್ಲದರಲ್ಲೂ ಭಾಗಿ ಆಗಬೇಕು ಎಂದವರು. ಈ ಹಿನ್ನಲೆ ಸಂವಿಧಾನ 73-74 ತಿದ್ದುಪಡಿ ಮಾಡಿ ಮಹಿಳೆಯರಿಗೆ ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಪ್ರಾತಿನಿಧ್ಯ ಇರಲಿ ಎಂದು ಮೀಸಲಾತಿ ಕಲ್ಪಿಸಿದರು. ಮಹಿಳೆಯರಿಗೆ ಶೇ 33 ರಷ್ಟು ಹಿಂದುಳಿದವರಿಗೆ ಶೇ 33 ರಷ್ಟು ಮೀಸಲಾತಿ ಕಲ್ಪಿಸಿದರು. ಮಾಡಿದರು. ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಶೇ 50 ರಷ್ಟು ಮಹಿಳೆಯರಿಗೆ ಅವಕಾಶ ಸಿಕ್ಕಿದೆ ಅಂದರೇ ಅದಕ್ಕೆ ರಾಜೀವ್ ಗಾಂಧಿ ಕಾರಣ . ಬಿಜೆಪಿ ಆಗಲಿ ಯಾವುದೇ ಪಕ್ಷದವರು ಇದನ್ನ ಜಾರಿಗೆ ತರಲಿಲ್ಲ ಎಂದು ಟೀಕಿಸಿದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ಎಸ್.ಮಲ್ಲಿಕಾರ್ಜುನ್ ಮಾತನಾಡಿ ದೇವರಾಜ ಅರಸು 1972 ರಿಂದ 1980 ರವರೆಗೆ ಮುಖ್ಯಮಂತ್ರಿಯಾಗಿದ್ದರು. ಹುಣಸೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸಾಮಾಜಿಕ ನ್ಯಾಯದ ಪರವಾಗಿ ಇದ್ದವರು. ಬಡವರ ಪರವಾಗಿ ಇದ್ದವರು. ಅಧಿಕಾರದಲ್ಲಿದ್ದಾಗಿ ನ್ಯಾಯ ಕೊಡಿಸಲು ಪ್ರಯತ್ನ ಮಾಡಿದರು. ಮಲ ಹೊರುವ ಪದ್ದತಿ ನಿಲ್ಲಿಸುವ ಮೂಲಕ ಜೀತಪದ್ದತಿಗೆ ಮಂಗಳ ಹಾಡಿದರು. ಅದಕ್ಕಾಗಿ ನಾವು ಅವರನ್ನು ಸಾಮಾಜಿಕ ನ್ಯಾಯ ಹರಿಕಾರ ಅಂತ ಕರೆಯುತ್ತೇವೆ ಎಂದು ತಿಳಿಸಿದರು.ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಹರೀಶ್ ಕೆ.ಎಲ್.ಬಸಾಪುರ ಮಾತನಾಡಿ ಉಳುವವನೇ ಭೂ ಒಡೆಯ ಎಂಬ ಯೋಜನೆ ತಂದರು. ಇಂದಿರಾಗಾAಧಿ ಅವರ ಬೆಂಬಲ ಜೊತೆಗೆ ಮಾಡಿದ್ದರು. ವಿಧಾನಸೌಧದ ಮೆಟ್ಟಿಲು ಹತ್ತದವರನ್ನು ವಿಧಾನಸೌಧಕ್ಕೆ ಬರುವ ಹಾಗೆ ಮಾಡಿದರು ಎಂದರು.