ಜಿಲ್ಲಾ ಕಸಾಪ : ಜು.೩೧ ಎರಡು ಕೃತಿಗಳು ಲೋಕಾರ್ಪಣೆ

ರಾಯಚೂರು.ಜು.೨೭- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ವತಿಯಿಂದ ಜು.೩೧ ರಂದು ಕನ್ನಡ ಭವನದಲ್ಲಿ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ರಂಗಣ್ಣ ಅಳ್ಳುಂಡಿ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಯ್ಯಪ್ಪಯ್ಯ ಹುಡಾ ಅವರ ಮಂದಾರ ಹೈಕು ಸಂಕಲನ ಹಾಗೂ ಪಿಸಿ ಓದಿಸೊ ಮಠ ಅವರ ಸವಿ ಜೇನು ಲೇಖನಗಳ ಸಂಕಲನ ಲೋಕಾರ್ಪಣೆ ಮಾಡಲಾಗುತ್ತದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರು ವಹಿಸಲಿದ್ದಾರೆ. ಕೃತಿಗಳ ಲೋಕಾರ್ಪಣೆಯನ್ನು ಹಿರಿಯ ಸಾಹಿತಿ ರಾಮಣ್ಣ ಹವಳೆ, ಕೃತಿ ಪರಿಚಯ ಹಿರಿಯ ಸಾಹಿತಿ ರುದ್ರಪ್ಪ ಪಗಡದಿನ್ನಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ದೇವದುರ್ಗ ಆರ್.ಇಂದಿರಾ ಅವರು ಮಾಡಲಿದ್ದಾರೆ.
ಮುಖ್ಯಾತಿಥಿಗಳಾಗಿ ಮಹಾಂತೇಶ ಮಸ್ಕಿ ಸೇರಿದಂತೆ ಇತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ೨೦೨೨-೨೩ ನೇ ಸಾಲಿನಾ ಕನ್ನಡ ಪ್ರವೇಶ ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ ಕೊನೆ ವಾರದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಆಗಸ್ಟ್ ೩೧ ರಂದು ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಸೆಪ್ಟೆಂಬರ್ ೧೫ ರವರೆಗೆ ದಂಡ ಶುಲ್ಕ ೫೦ ರೂ. ಹೆಚ್ಚುವರಿಯಾಗಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ೨೫ ರೂ. ಶುಲ್ಕ ಪಾವತಿ ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾರಾಟ ಮಳಿಗೆಯಲ್ಲಿ ೦೧-೦೭-೨೦೨೨ ರಂದು ಪಡೆಯಬಹುದಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಹೆಸರಿಗೆ ೩೦ ರೂ. ಮನೆ ಆರ್ಡರ್ ಮಾಡಿದರೆ, ಅರ್ಜಿ ಅಂಚೆಯ ಮೂಲಕ ಕಳುಹಿಸಲಾಗುತ್ತದೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಸುರೇಶ, ತಾಯಪ್ಪ ಹೊಸೂರು, ವೆಂಕಟೇಶ ಬೇವಿನಬೆಂಚಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.