ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ.ಎಂ.ಜಿ.ಈಶ್ವರಪ್ಪಗೆ ಶ್ರದ್ಧಾಂಜಲಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೩: ಸಾಹಿತಿ, ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಅವರ ನಿಧನಕ್ಕೆ ಜಿಲ್ಲಾ ಕಸಾಪ ವತಿಯಿಂದ ಭಾನುವಾರ ಸಂಜೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ವೈ. ವೃಷಭೇಂದ್ರಪ್ಪ ಕಸಾಪ,  ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ಕುರ್ಕಿ, ಹಿರಿಯ ಸಾಹಿತಿಗಳಾದ, ಬಾ.ಮ. ಬಸವರಾಜಯ್ಯ, ಬಿ.ಎನ್. ಮಲ್ಲೇಶ್, ಹೆಚ್. ಬಿ. ಮಂಜುನಾಥ್,  ಮಲ್ಲಿಕಾರ್ಜುನ ಕಲಮರಹಳ್ಳಿ,  ದಾದಾಪೀರ್ ನವಿಲೇಹಾಳ್, ನಾ. ರೇವನ್, ಆನಂದ್ ಋಗ್ವೇದಿ, ಶ್ರೀಧರ್, ಆವರಗೆರೆ ರುದ್ರಮುನಿ, ಶೈಲಜಾ, ಮಲ್ಲಮ್ಮ ನಾಗರಾಜ್,  ಇತರರು ನುಡಿನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ರೇವಣಸಿದ್ದಪ್ಪ ಅಂಗಡಿ, ಸತ್ಯಭಾಮಾ ಮಂಜುನಾಥ್, ಜಗದೀಶ್ ಕೂಲಂಬಿ,ರುದ್ರಾಕ್ಷಿ ಬಾಯಿ, ಜಿಗಳಿ ಪ್ರಕಾಶ್, ಮಧು ಕುಮಾರ್, ಭೈರೇಶ್,  ಸಂಧ್ಯಾ ಸುರೇಶ್, ಕಲಾವಿದ ಎ. ಮಹಾಲಿಂಗಪ್ಪ, ಕೆ.ಎಲ್. ಭಟ್, ಕಲಾವಿದ ಸಿದ್ಧರಾಜು, ಗುರುಮೂರ್ತಿ, ಐರಣಿ ಚಂದ್ರು,  ಹೆಗ್ಗೆರೆ ರಂಗಪ್ಪ,  ಸೇರಿದಂತೆ ಅನೇಕ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿದ್ದರು.