ಜಿಲ್ಲಾ ಕನ್ನಡ ಜಾನಪದ ಪರಿಷತ್: ದಾನಮ್ಮ ಆಯ್ಕೆ

ರಾಯಚೂರು.ನ.೪-ರಾಯಚೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ದಾನಮ್ಮ ಸುಬಾಷಚಂದ್ರ ಕಡಗಂಚಿ ಇವರನ್ನು ನೇಮಿಸಲಾಗಿದೆ.
ಕನ್ನಡ ಜಾನಪದ ಪರಿಷತ್ತಿನ ಜಾನಪದ ಕಲೆಗಳ ಕ್ಷೇತ್ರಕಾರ್ಯ ದಾಖಲೀಕರಣ, ತರಬೇತಿ ಇತ್ಯಾದಿ ಕಾರ್ಯಗಳನ್ನು ಮತ್ತು ಜಾನಪದ ಚಟುವಟಿಕೆಗಳನ್ನು ಜಿಲ್ಲಾ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಜಿಲ್ಲಾ ಮಹಿಳಾ ಘಟಕವನ್ನು ರಚಿಸಿದ್ದು, ತಾಲೂಕಾ ಘಟಕಗಳ ನೇಮಕ ಜೊತೆಯಲ್ಲಿ ಗ್ರಾಮ ಘಟಕಗಳನ್ನು ನೇಮಿಸುವ ಮೂಲಕ ಜಾನಪದ ಚಟುವಟಿಕೆಗಳನ್ನು ಕ್ರಿಯಾ ಶೀಲವಾಗಿ ಮುನ್ನಡೆಸುವ ಸಲುವಾಗಿ ಕಲಾವಿದರಿಗೆ ಗುರುತಿಸಿ ಜಾನಪದ ಕ್ಷೇತ್ರ ಬೆಳಿಸಲು ಇವರ ಕಾರ್ಯಕ್ರಮಗಳ ಸಾಮಾರ್ಥ್ಯ ಅನುಸರಿಸಿ ದಾನಮ್ಮ ಸುಭಾಸಚಂದ್ರ ಕಡಗಂಚಿಯವರನ್ನು ರಾಯಚೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲು ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷರು ಮತ್ತು ಕಲ್ಯಾಣ ಕರ್ನಾಟಕ ಕನ್ನಡ ಜಾನಪದ ಫರಿಷತ್‌ನ ವಿಭಾಗಿಯ ಸಂಚಾಲಕರಾದ ಡಾ. ಶರಣಪ್ಪ ಗೋನಾಳ ಅವರ ಅನುಮೋದನೆಯಂತೆ ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿಯವರು ಇವರನ್ನು ನೇಮಿಸಿ ತಕ್ಷಣದಿಂದಲೇ ಜಾನಪದ ಚಟುವಟಿಕೆಗಳನ್ನು ಪ್ರಾರಂಭಿಸಲು ಆದೇಶದ ಮೂಲಕ ತಿಳಿಸಿದ್ದಾರೆ.