ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘದ ಯುವ ಘಟಕ ಅಧ್ಯಕ್ಷರಾಗಿ ಅಕ್ಷಯ್ ಕೆ.ಸಿ.

ಸುಳ್ಯ:ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘದ ಯುವ ಘಟಕದ ಅಧ್ಯಕ್ಷರಾಗಿ ಸುಳ್ಯ ಕೆ.ವಿ.ಜಿ ಸಂಸ್ಥೆಯ ನಿರ್ದೇಶಕ ಅಕ್ಷಯ್ ಕೆ.ಸಿ. ಆಯ್ಕೆಯಾಗಿದ್ದಾರೆ.
ದ ಕ ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸಭೆಯಲ್ಲಿ ದ. ಕ. ಜಿಲ್ಲಾ ಗೌಡ ಸೇವಾ ಸಂಘದ ಯುವ ಘಟಕ ಮತ್ತು ಮಹಿಳಾ ಘಟಕವನ್ನು ಪ್ರಾರಂಭಿಸುವುದಾಗಿ ತೀರ್ಮಾನಿಸಲಾಗಿತ್ತು. ಜಿಲ್ಲಾ ಒಕ್ಕಲಿಗ ಸೇವಾ ಸಂಘದ ಯುವ ಘಟಕದ ಅಧ್ಯಕ್ಷರಾಗಿ ಅಕ್ಷಯ್ ಕೆ ಸಿ ಮತ್ತು ಮಹಿಳಾ ಘಟಕದ ಅಧ್ಯಕ್ಷರಾಗಿ ಗೌರಿ ಬನ್ನೂರು ಆಯ್ಕೆಯಾದರು. ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘದ ಯುವ ಘಟಕದ ಉಪಾಧ್ಯಕ್ಷರಾಗಿ ಯಶವಂತ ಗೌಡ ಬೆಳ್ತಂಗಡಿ, ಕಾರ್ಯದರ್ಶಿಯಾಗಿ ಗಣೇಶ್ ಗೌಡ ಕಲಾಯಿ ಮಂಗಳೂರು, ಸಹ ಕಾರ್ಯದರ್ಶಿಯಾಗಿ ದಿನೇಶ್ ಮಾಡ್ತೆಲ್, ಖಜಾಂಜಿಯಾಗಿ ಎ.ವಿ. ನಾರಾಯಣ ಪುತ್ತೂರು, ಸಂಘಟನಾ ಕಾರ್ಯದರ್ಶಿಯಾಗಿ ಮೋಹನಗೌಡ ಕೆರೆಕೋಡಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರುಗಳಾಗಿ ಮಂಗಳೂರು ಗೌಡ ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಸುಳ್ಯ ತಾಲ್ಲೂಕು ಗೌಡರ ತರುಣ ಘಟಕದ ಅಧ್ಯಕ್ಷ ರಜತ್ ಗೌಡ, ಬಂಟ್ವಾಳ ತಾಲೂಕು ಗೌಡರ ಯುವ ಘಟಕದ ಅಧ್ಯಕ್ಷ ವಿನಯ್ ಕುಮಾರ್ ಪೂಣಚ್ಚ, ಪುತ್ತೂರು ತಾಲೂಕು ಗೌಡರ ಯುವ ಘಟಕದ ಅಧ್ಯಕ್ಷ ರಾಧಾಕೃಷ್ಣ ನಂದಿಲ, ಜಿಲ್ಲಾ ನಿರ್ದೇಶಕರುಗಳಾಗಿ ಸುಳ್ಯದ ಶ್ರೀಕಾಂತ್ ಮಾವಿನಕಟ್ಟೆ, ವರದರಾಜ ಸಂಕೇಶ, ನಿಕೇಶ್ ಉಬರಡ್ಕ ಆಯ್ಕೆಯಾದರು.
ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಭಾರತಿ ಧರ್ಣಪ್ಪ ಗೌಡ ಬೆಳ್ತಂಗಡಿ , ಕಾರ್ಯದರ್ಶಿಯಾಗಿ ಲತಾ ಪ್ರಸಾದ್ ಕುದ್ಪಾಜೆ ಸುಳ್ಯ, ಜೊತೆ ಕಾರ್ಯದರ್ಶಿಯಾಗಿ ಸರೋಜಿನಿ ಜಯಪ್ರಕಾಶ್ ಕಡಬ, ಕೋಶಾಧಿಕಾರಿಯಾಗಿ ಸೌಮ್ಯ ಸುರೇಶ್ ಮಂಗಳೂರು, ಸಂಘಟನಾ ಕಾರ್ಯದರ್ಶಿಯಾಗಿ ಜಲಜಾಕ್ಷಿ ಬಂಟ್ವಾಳ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸುಳ್ಯ ತಾಲ್ಲೂಕು ಗೌಡರ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಪುತ್ತೂರು ತಾಲ್ಲೂಕು ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್. ಡಿ. ಶಿವರಾಮ ಗೌಡ, ಬಂಟ್ವಾಳ ತಾಲ್ಲೂಕು ಗೌಡ ಸೇವಾ ಸಂಘದ ಅಧ್ಯಕ್ಷ ಮೋಹನ್ ಗೌಡ ಕಾಯರ್ ಮಾರ್, ಮಂಗಳೂರು ಗೌಡ ಸೇವಾ ಸಂಘದ ಅಧ್ಯಕ್ಷ ದಾಮೋದರ ನಾರಾಲು, ಬೆಳ್ತಂಗಡಿ ತಾಲ್ಲೂಕು ಗೌಡರು ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ದ.ಕ. ಜಿಲ್ಲಾ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಬೈಲಾಡಿ, ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ, ನಿತ್ಯಾನಂದ ಮುಂಡೋಡಿ, ಧನಂಜಯ ಅಡ್ಪಂಗಾಯ ಹಾಗೂ ಎಲ್ಲಾ ತಾಲ್ಲೂಕಿನ ಗೌಡರ ಸೇವಾ ಸಂಘದ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಯುವ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.