ಜಿಲ್ಲಾ ಎರಡನೆ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆಸಾಹಿತ್ಯ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ ಕವಿತಾ

ವಿಜಯಪುರ:ಡಿ.30:ಎರಡು ದಿನಗಳ ಎರಡನೆ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಬೆಳಗ್ಗೆ ವಿಧ್ಯುಕ್ತ ಚಾಲನೆ ದೊರೆಯಿತು.
ವಿಜಯಪುರ ತಹಸೀಲ್ದಾರ ಕವಿತಾ ಆರ್. ಅವರು ಬೆಳಗ್ಗೆ 8 ಗಂಟೆಗೆ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ ಸಮ್ಮೇಳನ ಜರುಗುತ್ತಿರುವುದು ಹೆಮ್ಮೆಯ ಸಂಗತಿ. ಮಹಿಳಾ ಸಾಹಿತಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು. ಕನ್ನಡ ಸಾಹಿತ್ಯ ನಮ್ಮೆಲ್ಲರ ಬದುಕು ಕಟ್ಟಿದೆ. ನಮ್ಮ ಅನ್ನದ ಮತ್ತು ಆಡಳಿತ ಭಾಷೆ ಕನ್ನಡವಾಗಿರುವುದರಿಂದ ಕನ್ನಡವೇ ನಮ್ಮ ಉಸಿರು ಎಂದು ಭಾವಿಸಿ ಈ ನಾಡಿನ ಕೀರ್ತಿಯನ್ನು ಬೆಳಸೋಣ ಎಂದು ನುಡಿದರು.
ನಾಡ ಧ್ವಜವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ ನೆರವೇರಿಸಿದರು. ಸಾಹಿತ್ಯ ಪರಿಷತ್ತಿನ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾ ಗೌರವ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ನೆರವೇರಿಸಿದರು. ಪದಾಧಿಕಾರಿಗಳಾದ ಅಭಿಷೇಕ ಚಕ್ರವರ್ತಿ, ಕಮಲಾ ಮುರಾಳ , ಸುಭಾಸ ಕನ್ನೂರ , ವಿದ್ಯಾವತಿ ಅಂಕಲಗಿ, ರಾಜಾಸಾಬ ಶಿವನಗುತ್ತಿ, ಸಿದ್ರಾಮಯ್ಯ ಲಕ್ಕುಂಡಿಮಠ, ಡಾ. ಆನಂದ ಕುಲಕರ್ಣಿ, ಶಿವಾನಂದ ಬಡಾನೂರ, ಇಂದಿರಾ ಬಿದರಿ, ವಾಣಿ ಕುಲಕರ್ಣಿ, ಶಿಲ್ಪಾ ಹಂಜಿ, ವಿಜಯಲಕ್ಷ್ಮಿ ಹಳಕಟ್ಟಿ, ಚೈತನ್ಯ ಮುದ್ದೇಬಿಹಾಳ, ಅನ್ನಪೂರ್ಣ ಬೆಳ್ಳಣವರ, ಸುಖದೇವಿ ಅಲಬಾಳಮಠ, ಭುವನೇಶ್ವರಿ ಮೇಲಿನ ಮಠ, ರುದ್ರಮ್ಮ ಗಿಡ್ಡಪ್ಪಗೋಳ ಮುಂತಾದವರು ಇದ್ದರು.