ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರಿಗೆ ದಳಪತಿಗಳ ಸಂಘದಿಂದ ಮನವಿ

ಬೀದರ:ಜ.28:ದಳಪತಿಗಳಿಗೆ ನ್ಯಾಯಾಲಯ ನೀಡಿರುವ ತಿರಿಪನಂತೆ ಗೌರವ ಧನ ಸರಕಾರದಿಂದ ಕೊಡಿಸುವಂತೆ ಅರಣ್ಯ,ಜೈವಿಕ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರಿಗೆ ಮನವಿ ಪತ್ರ ಸಲ್ಲಿ ಒತ್ತಾಯಿಸಿದರು.
ಗ್ರಾಮ ರಕ್ಷಣ ದಳಪತಿಗಳ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಎ.ಜಿ.ಪಾಟೀಲ್,ಬೀದರ ಜಿಲ್ಲಾದ್ಯಕ್ಷ ಪ್ರಭುರಾವ ಹಾಲಹಳ್ಳಿ ಹಾಗು ಶಂಕರಾವ ಕಡ್ಯಾಳ ಸೇರಿದಂತೆ ತಾಲೂಕಗಳ ಅಧ್ಯಕ್ಷರು ಶನಿವಾರದಂದು ಭಾಲ್ಕಿಯಲಿನ ಅವರ ನೀವಾಸಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿದ್ದರು.
ಈ ಆರ್.ಗುಂಡುರಾವ ಮುಖ್ಯಮಂತ್ರಿಗಳಾಗಿದ್ದಾಗ ಅಂದಿನ ಗ್ರಹ ಸಚಿವ ಬಿ.ರಾಚಯ್ಯ ಅವರು ಗ್ರಾಮದಲ್ಲಿರುವ ದಳಪತಿಗಳಿಗೆ ಗೌರವ ಧನ ಕೊಡುವದಾಗಿ ಎಂದು ಘೊಷಣೆ ಮಾಡಿದರು.ನಂತರದ ಸರಕಾರಗಳು ಇಲ್ಲಿಯವರೆಗೆ ಗೌರವ ಧನ ನೀಡದೆ ಮಲತಾಯಿ ಧೋರಣೆ ಅನುಸರಿಸುತಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಂದು ಕಾಂಗ್ರೆಸ್ ಸರಕಾರ ದಳಪತಿಗಳಿಗೆ ಗೌರವ ಧನ ಘೊಷಣೆ ನಂತರ ನ್ಯಾಯಲದ ಮೊರೆ ಹೊಗಲಾಯಿತ್ತು.
ನ್ಯಾಯಲಯವು ನಮ್ಮ ಅರ್ಜಿ ಪರಿಗಣಿಸಿ ಪ್ರತಿ ತಿಂಗಳು 1 ಸಾವಿರ ರೂ ಹಾಗೂ ಅರಿಯರ್ಸ್ ನೀಡುವಂತೆ 2002 ರಲ್ಲಿಯೆ ಆದೇಶ ಮಾಡಿತ್ತು.
ಆದರು ಇಲ್ಲಿಯವರಗೆ ಒಂದು ನಯಾಪೈಸೆ ಯಾವ ಸರಕಾರ ನೀಡಲಿಲ್ಲ.
ಪ್ರತಿ ತಿಂಗಳು ಕನಿಷ್ಠ 5 ಸಾವಿರ ರೂ.ನೀಡಬೇಕು,ಮ್ರತರಾದ ದಳಪತಿಗಳ ಪರಿವಾರದಲ್ಲಿ ಒಬ್ಬರಿಗೆ ಸರಕಾರಿ ನೌಕರಿ ನೀಡುವದು ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಇದೆ ವೇಳೆ ಮನವಿ ಸ್ವಿಕರಿಸಿ ಮಾತನಾಡಿದ ಸಚಿವರು ತಮ್ಮ ಮನವಿಗೆ ಗಂಭಿರವಾಗಿ ಪರಿಗಣಿಸಿ ಮುಖ್ಯ ಮಂತ್ರಿ ಹಾಗೂ ಗ್ರಹ ಸಚಿವರೊಂದಿಗೆ ಚರ್ಚಿಸಿ ಗೌರವ ಧನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಎಂದು ಭರವಸೆ ನೀಡಿದರು