ರಾಯಚೂರು,ಏ.೦೮- ಜಾತ್ಯತೀತ ಜನತಾದಳ ಪಕ್ಷದ ಪರಿಶಿಷ್ಟ ಪಂಗಡದ ಜಿಲ್ಲಾ ಉಪಾಧ್ಯಕ್ಷರಾಗಿ ಎಂ ಭೀಮಯ್ಯ ನಾಯಕ ಅವರನ್ನು ನೇಮಕ ಮಾಡಲಾಗಿದೆ ಎಂದು ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷರಾದ ಹಂಪಯ್ಯ ನಾಯಕ ತಿಳಿಸಿದ್ದಾರೆ.
ಜಾತ್ಯತೀತ ಜನತಾದಳ ಪಕ್ಷದ ಜಿಲ್ಲಾಧ್ಯಕ್ಷರಾದ ಎಂ. ವಿರೂಪಾಕ್ಷಪ್ಪ ಆದೇಶದ ಮೇರೆಗೆ ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರ ಅಭ್ಯರ್ಥಿಯಾದ ಕೆ. ಸಣ್ಣನರಸಿಂಹ ನಾಯಕ ರವರ ಆದೇಶದ ಮೇರೆಗೆ ಎಂ.ಭೀಮಯ್ಯ ನಾಯಕ ಅವರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಜೆಡಿಎಸ್ ಪಕ್ಷದ ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷರಾದ ಹಂಪಯ್ಯ ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.