ಜಿಲ್ಲಾ ಉತ್ಸವ ಆಚರಣೆಗೆ ಮನವಿ

ರಾಯಚೂರು,ಜ.೧೯- ರಾಯಚೂರು ಜಿಲ್ಲಾ ಉತ್ಸವ ಆಚರಿಸುವಂತೆ ಕನ್ನಡ ಚಳವಳಿ ಕೇಂದ್ರ ಸಮಿತಿ ಕೆ.ಗೋವಿಂದರಾಜ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಳೆದ ಒಂದುವರೆ ದಶಕಗಳಿಂದ ರಾಯಚೂರು ಜಿಲ್ಲಾ ಉತ್ಸವಗಳನ್ನು ನಡೆಸದೇ ಇರುವುದರಿಂದ ಜಿಲ್ಲಾ ಉತ್ಸವಗಳು ಮರೆಯಾಗಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ೨೦೨೩ನೇ ಸಾಲಿನ ಫೆಬ್ರುವರಿ ತಿಂಗಳ ಒಳಗಡೆ ರಾಯಚೂರು ಜಿಲ್ಲಾ ಉತ್ಸವವನ್ನು ಆಚರಿಸಬೇಕೆಂದು ಮನವಿ ಮಾಡಿದರು. ಇತ್ತೀಚೆಗೆ ಬಳ್ಳಾರಿ, ಬೀದರ, ಹಾವೇರಿ, ಹಾಗೂ ಇನ್ನಿತರೆ ಜಿಲ್ಲೆಗಳಲ್ಲಿ ಉತ್ಸವಗಳನ್ನು ಅಚರಿಸಿದ್ದು, ಸಧ್ಯದಲ್ಲಿಯೇ ಹಂಪಿ ಉತ್ಸವವನ್ನು ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಉತ್ಸವಗಳನ್ನು ಆಚರಣೆ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಗಡಿನಾಡು ಉತ್ಸವಗಳನ್ನು ಆಚರಣೆ ಮಾಡದೇ ಇರುವುದರಿಂದ ಅವುಗಳನ್ನು ಕೂಡಾ ಅತೀ ಶೀಘ್ರದಲ್ಲಿ ಜಿಲ್ಲಾ, ಮತ್ತು ಜಿಲ್ಲಾ ಗಡಿನಾಡು ಉತ್ಸವಗಳನ್ನು ಆಚರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆ. ಗೋವಿಂದರಾಜ್ ಸೇರಿದಂತೆ ಇತರರು ಇದ್ದರು.