ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆಯಿಂದ ಮೇಯರ್ ಗೆ ಸನ್ಮಾನ

 ದಾವಣಗೆರೆ.ಡಿ.೨೯; ನಗರದ ಮಹಾನಗರಪಾಲಿಕೆಯಲ್ಲಿ  ದಾವಣಗೆರೆ ಜಿಲ್ಲಾ ಅಮೇಚೂರು ಕಬಡ್ಡಿ ಸಂಸ್ಥೆಯ ಛೇರ‍್ಮನ್ ಆಗಿರುವ ಮೇಯರ್ ಬಿ.ಜೆ ಅಜೇಯ್ ಕುಮಾರ್ ಅವರುಗೆ ಅಮೆಚೂರು  ಕಬಡ್ಡಿ ಸಂಸ್ಥೆಯಿಂದ ಆತ್ಮೀಯ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯದರ್ಶಿಗಳಾದ ಎಂ.ನಾರಾಯಣಸ್ವಾಮಿ ಹಾಗೂ ಜಿಲ್ಲಾ ಅಧ್ಯಕ್ಷರಾದ ಎಂ. ನಾಗರಾಜ್ ಹಾಗೂ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಮೈಟ್ ಹೊಂದಿದ ಹೊಸ ಕ್ರೀಡಾಂಗಣ ನಿರ್ಮಿಸಿಕೊಡಲು ಮನವಿ ಸಲ್ಲಿಸಲಾಯಿತು.