ಜಿಲ್ಲಾಸ್ಪತ್ರೆಯಲ್ಲಿ ಉಚಿತ ಆಹಾರ- ನೀರಿನ ಬಾಟಲ್ ವಿತರಣೆ

ದಾವಣಗೆರೆ.ಮೇ.೧೮; ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸೈಯದ್ ಖಾಲಿದ್ ಅಹ್ಮದ್ ಹಾಗೂ ತಂಡದವರಿಂದ ನಗರದ ಚಿಗಟೇರಿ ಆಸ್ಪತ್ರೆಯ ಆವರಣದಲ್ಲಿ ಉಚಿತ ಆಹಾರ ಹಾಗೂ ನೀರಿನ ಬಾಟಲ್‌ಗಳನ್ನು ಹಂಚಲಾಯಿತು.ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿರುವ ಜನಗಳಿಗೆ ದಿನಾಲೂ ಒಂದಿಲ್ಲೊಂದು ಸಾಮಾಜಿಕ ಕಾರ್ಯಗಳಿಂದ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಈ ವೇಳೆ ಮೊಹಮ್ಮದ್ ಜಿಕ್ರಿಯಾ, ಸುರೇಶ್.ಎಂ.ಜಾಧವ್, ರಿಯಾಜುದ್ದೀನ್, ಉತ್ತರ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ರಫೀಕ್, ಯುವ ಮುಖಂಡರಾದ ಮಹಬೂಬ್ ಬಾಷಾ, ಫಜ್ಲೂರ್ ರಹಮಾನ್, ಸಂತೋಷ್, ರಾಜಿಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.