ಜಿಲ್ಲಾಯೂತ್ ಕಾಂಗ್ರೆಸ್ ನಿಂದ ತಂಪುಪಾನಿಯ ವಿತರಣೆ

ದಾವಣಗೆರೆ.ಮೇ.೩;  ಕೊರೊನ ಎರಡನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುತ್ತಿರುವ ಪೊಲೀಸ್ ಇಲಾಖೆಯ ಬಡಾವಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರವಿಂದ್ ಮತ್ತು ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗಳಿಗೆ ದಾವಣಗೆರೆ ಜಿಲ್ಲಾ ಯೂತ್ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ ಶೆಟ್ಟಿ ಅವರು ನೀರಿನ ಬಾಟಲ್ ತಂಪು ಪಾನೀಯ ಬಿಸ್ಕೆಟ್ ಮಾಸ್ಕ್ ವಿತರಿಸಿದರು ಅವರು ಮಾತನಾಡಿ ಜನರು ಮಾಸ್ಕ್ ಧರಿಸಿ  ಸಾಮಾಜಿಕಅಂತರ ಕಾಯ್ದುಕೊಂಡು ಮನೆಯಲ್ಲಿ ಇದ್ದು ಪೊಲೀಸ್ ಅಧಿಕಾರಿಗಳಿಗೆ ಸಹಕರಿಸಿ ಈ ಕರೋನಾ ರೋಗವನ್ನು ತಡೆಗಟ್ಟುವಂತೆ ಜನಗಳಲ್ಲಿ ಮನವಿ ಮಾಡಿಕೊಂಡರು ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬೆಳ್ಳೂಡಿ ಮಂಜುನಾಥ್ ಕೇರಂ ಗಣೇಶ್  ಲಿಯಾಖತ್ ಅಲಿ, ಹರೀಶ್.  ಹೆಚ್,ರಿಯಾಜುದ್ದೀನ್,ಮೊಹಮ್ಮದ್ ಜಿಕ್ರಿಯಾ,ಮಹಬೂಬ್ ಬಾಷಾ, ಗೋಪಾಲ್  ಯುವರಾಜ್ ಇನ್ನು ಮುಂತಾದವರಿದ್ದರು