
ಬೀದರ,ಅ 25: ಕರ್ನಾಟಕರಾಜ್ಯ ಸಹಕಾರ ಮಹಾಮಂಡಳ, ಬೀದರಜಿಲ್ಲಾ ಸಹಕಾರಯೂನಿಯನ್,ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ,ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿಬೀದರಜಿಲ್ಲೆಯಲ್ಲಿ ಬರುವಕುರಿ
ಮತ್ತುಉಣ್ಣೆಉತ್ಪಾದಕರ , ನೇಕಾರರ ಸಹಕಾರ ಸಂಘಗಳಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಒಂದು ದಿನದ ಜಿಲ್ಲಾಮಟ್ಟದ ವಿಶೇಷ ತರಬೇತಿ ಶಿಬಿರವನ್ನುಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ರೈತ ತರಬೇತಿ
ಕೇಂದ್ರದಲ್ಲಿ ಏರ್ಪಡಿಸಲಾಯಿತು.
ಪಶುಪಾಲನಾಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ನರಸಪ್ಪ ಎ. ಡಿ.ಅವರು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಪವನರಾಠೋಡ,ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯ ಅಧಿಕಾರಿ ಡಾ. ವಿಕ್ರಂಚಾಕೋತೆ, ನೇಕಾರರ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಜಗದೀಶ,ಸಹಾರ್ದ ಡಿ.ಸಿ.ಸಿಬ್ಯಾಂಕ್‍ತರಬೇತಿಕೇಂದ್ರ ನಿರ್ದೇಶಕ ಸುಬ್ರಮಣ್ಯ ಪ್ರಭು,ಕರ್ನಾಟಕಕುರಿ ಮತ್ತುಉಣ್ಣೆಉತ್ಪಾದಕರ ನಿಗಮದ ಸಹಾಯಕ ನಿರ್ದೇಶಕಡಾ.ಯೋಗೇಂದ್ರಕುಲಕರ್ಣಿ,
ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ರವೀಂದ್ರ ಭೂರೆ, ಶಿವರಾಜ ಮಲ್ಲೇಶಿ, ಡಾ. ಸುಜಾತ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿಡಾ. ಜಗದೀಶ, ಡಾ. ಯೋಗೇಂದ್ರಕುಲಕರ್ಣಿ ಅವರು ಕುರಿ ಮತ್ತುಮೇಕೆಗಳಿಗೆ ಬರುವ ರೋಗಗಳ ನಿರ್ವಹಣೆ ಹಾಗೂಇಲಾಖೆಯಿಂದದೊರೆಯುವಂತಹ ಸೌಲಭ್ಯಗಳ ಕುರಿತು
ಮತ್ತು ಸುಬ್ರಮಣ್ಯ ಪ್ರಭು ಅವರು ಅಧ್ಯಕ್ಷರು,ಕಾರ್ಯದರ್ಶಿಗಳ ಹಕ್ಕು, ಕರ್ತವ್ಯ ಮತ್ತುಜವಾಬ್ದಾರಿ ಹಾಗೂ ಸಭೆಗಳು ಜರುಗಿಸುವಕುರಿತು ನರೇಶಜಂಬೂಲಕರ ಅವರು ಕೇಂದ್ರಸರ್ಕಾರದಿಂದದೊರೆಯುವಂತಹ ನೇಕಾರರಿಗೆ ಸಿಗುವಸೌಲಭ್ಯಗಳ ಕುರಿತುಉಪನ್ಯಾಸ ನೀಡಿದರು.ರೇಣುಕಾಪಾಟೀಲ ಪ್ರಾರ್ಥಿಸಿದರು. ಮಾರುತಿ ಕೆ. ನಿರೂಪಿಸಿ ಸ್ವಾಗತಿಸಿದರು.ಹೆಚ್. ಆರ್. ಮಲ್ಲಮ್ಮ ವಂದನಾರ್ಪಣೆ ನಡೆಸಿಕೊಟ್ಟರು.