ಜಿಲ್ಲಾಮಟ್ಟದ ರೋವರ್ ಸ್ಕೌಟ್ ಲೀಡರ್ಸ್ ಸಭೆ

ಸಂಜೆವಾಣಿ ವಾರ್ತೆ

ದಾವಣಗೆರೆ ‌ಮೇ.೩೧; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ದಾವಣಗೆರೆ ವತಿಯಿಂದ ಡಿ ಆರ್ ಆರ್ ಸ್ಕೌಟ್  ಭವನದಲ್ಲಿ ಜಿಲ್ಲಾಮಟ್ಟದ ರೋವರ್ ಸ್ಕೌಟ್ ಲೀಡರ್ಸ್ ಮತ್ತು ರೇಂಜರ್ಸ್ ಲೀಡರ್ಸ್ ಗಳ ಸಭೆಯನ್ನು ಜಿಲ್ಲಾ ಮುಖ್ಯ ಆಯುಕ್ತರ ಮುರುಘರಾಜೇಂದ್ರ ಚಿಗಟೇರಿಯವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು.ಈ ವೇಳೆ  2024-25 ನೇ ಸಾಲಿನ ಘಟಕ ರಚನೆ,ಘಟಕಗಳನ್ನು ಹೆಚ್ಚಿಸಿ ತರಬೇತಿಯನ್ನು ನೀಡುವುದು,ಸೇವಾ ಕಾರ್ಯ ಚಟುವಟಿಕೆ, ಪದಕ ತರಬೇತಿ, ಚಾರಣ ಶಿಬಿರ ಆಯೋಜನೆ, ವಾರ್ಷಿಕ ಚಟುವಟಿಕೆಗಳ ಬಗ್ಗೆ  ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ರೇಂಜೆರ್ಸ್ ಮತ್ತು ರೋವರ್ಸ್ ಅವರನ್ನು ಒಳಗೊಡಂತೆ ಈ ಬಾರಿ ತುಂಬಾ ವಿಶೇಷವಾಗಿ ಆಚರಿಸಬೇಕು ಎಂದು  ತೀರ್ಮಾನಿಸಲಾಯಿತು.ಜಿಲ್ಲಾ ಮುಖ್ಯ ಆಯುಕ್ತರು ಎಲ್ಲರೊಂದಿಗೆ ಚರ್ಚಿಸಿ ಮಾಹಿತಿಯನ್ನು ನೀಡಿದರು.  ಜಿಲ್ಲಾ ಸ್ಕೌಟ್ ಆಯುಕ್ತರು ಎ ಪಿ ಷಡಕ್ಷರಪ್ಪ ಮತ್ತು ಜಿಲ್ಲಾ ಗೈಡ್ ಆಯುಕ್ತರು ಶಾರದಾ ಮಾಗನಹಳ್ಳಿ  , ಸಹಾಯಕ ಜಿಲ್ಲಾ ಆಯುಕ್ತರಾದ ಎನ್. ಕೆ ಕೊಟ್ರೇಶ್.  ಜಿಲ್ಲಾ ಕಾರ್ಯದರ್ಶಿಗಳಾದ ಎಂ ರತ್ನ.   , ಜಿಲ್ಲಾ ಸಹ ಕಾರ್ಯದರ್ಶಿ  ಸುಖವಾನಿ  ಉಪಸ್ಥಿತರಿದ್ದು ಅನೇಕ ವಿಷಯಗಳ ಬಗ್ಗೆ  ಚರ್ಚಿಸಿದರು. ರೋವರ್ ಸ್ಕೌಟ್ ಲೀಡರ್ ಮತ್ತು ರೇಂಜರ್ ಲೀಡರ್ಸ್  ವಿಷಯಗಳ ಬಗ್ಗೆ  ಚರ್ಚಿಸಿ  ಮುಖ್ಯ ಆಯುಕ್ತರಿಂದ ಮತ್ತು ಪದಾಧಿಕಾರಿಗಳಿಂದ ಸೂಕ್ತ ಮಾಹಿತಿಯನ್ನು ಪಡೆದುಕೊಂಡರು . ಅಶ್ವಿನಿ ಎಸ್. ಜಿ. ವಿ ಸಭೆಯನ್ನು ನಿರೂಪಿಸಿ ವಂದಿಸಿದರು.