ಜಿಲ್ಲಾಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾದ ಕೆ ಪಿ ವಿಕಾಸ್ 

ದಾವಣಗೆರೆ, ಜು.೧೯;  ಜಿಲ್ಲಾ ಗುರುಭವನದಲ್ಲಿ ಪ್ರೌಢಶಾಲಾ ಹಂತದ ಮಕ್ಕಳಿಗೆ ಏರ್ಪಡಿಸಲಾದ “ದಾವಣಗೆರೆ ತಾಲೂಕು ಮಟ್ಟದ  ಯೋಗ ಸ್ಪರ್ಧೆ” ಯಲ್ಲಿ ಸರ್ಕಾರಿ ಪ್ರೌಢಶಾಲೆ ಕುರ್ಕಿ, ದಾವಣಗೆರೆ ದಕ್ಷಿಣ ವಲಯ.ಈ ಶಾಲೆಯ ವಿದ್ಯಾರ್ಥಿಗಳಾದ ಕೆ ಓ ಜೀವನ್ , ಕೆ ಪಿ ವಿಕಾಸ್, ಕೆ ಎನ್ ಮನೋಜ್, ಸಿ ಮಲ್ಲಿಕಾರ್ಜುನ್ ಹಾಗೂ ಮಹಾಂತೇಶ  ಭಾಗವಹಿಸಿದ್ದರು. ಇದರಲ್ಲಿಕೆ ಪಿ ವಿಕಾಸ್  ಅತ್ಯುತ್ತಮ ಯೋಗ ಪ್ರದರ್ಶನ ನೀಡುವುದರೊಂದಿಗೆ ತಾಲೂಕು ಮಟ್ಟದ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ  ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.ಈ ವಿದ್ಯಾರ್ಥಿಗೆ ಶಾಲಾ ಮುಖ್ಯೋಪಾಧ್ಯಾಯರಾದ  ಆರ್ ಗಣೇಶಾಚಾರ್,ಹಾಗೂ ಎಲ್ಲಾ ಶಿಕ್ಷಕರುಗಳು ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಓಂಕಾರಪ್ಪ,ಮತ್ತು ಸದಸ್ಯರುಗಳು ಹಾಗೂ ಪೋಷಕರು ಅಭಿನಂದಿಸಿ ಜಿಲ್ಲಾ ಮಟ್ಟದಲ್ಲೂ ಜಯಶಾಲಿಯಾಗುವಂತೆ ಶುಭ ಕೊರಿದ್ದಾರೆ.