ಜಿಲ್ಲಾಮಟ್ಟದ ಮತದಾರ ಜಾಗೃತಿ ಸ್ಪರ್ಧೆ

ವಿಜಯಪುರ, ನ.25-ಪ್ರಜಾಪಭುತ್ವ ಯಶಶ್ವಿಯಾಗಬೇಕಾದರೆ ಪ್ರಬುದ್ದ ಹಾಗೂ ಜಾಗರೂಕ ಮತದಾರರಿಂದಲೇ ಸಾಧ್ಯ, ಉತ್ತಮ ನಾಗರಿಕನಾಗಿ ಸುಭದ್ರ ಸರಕಾರದ ರಚನೆಗಾಗಿ ಇಂದಿನ ಯುವಕರಿಗೆ ತರಭೇತಿ ಅಗತ್ಯ. ಮತದ ಮಹತ್ವ ತಿಳಿಸಲು ಪ್ರೌಢ ಹಾಗೂ ಪದವಿ ಪೂರ್ವ ಹಂತದಿಂದಲೇ ತರಭೇತಿ ನೀಡಬೇಕು. ಇಂದು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪ್ರಬಂಧ, ಚಿತ್ರಕಲೆ, ರಸಪ್ರಶ್ನೆ ತರಹದ ಅನೇಕ ಸ್ಫರ್ದೆ ಹಮ್ಮಿಕೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎನ್. ಬಗಲಿ ಅಭಿಪ್ರಾಯಪಟ್ಟರು.
ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಾಲಿಕೆಯರ ಸರಕಾರಿ ಪ.ಪೂ.ಕಾಲೇಜಿನ ಶಾರದಾ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಯ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡುತ್ತ “ಭಾರತ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಹಾಗೂ ಯಶಶ್ವಿ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರ, ಇದನ್ನು ಮುಂದುವರಿಸಲು 18 ವರ್ಷ ತುಂಬಿದ ಎಲ್ಲ ಯುವಕ/ಯುವತಿಯರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು ಮತ ಚಲಾಯಿಸಬೇಕು. ಹಾಗೂ ಇತರರಿಗೆ ಮತ ಚಲಾಯಿಸುವಂತೆ ಪ್ರೇರಣೆ ನೀಡಬೇಕು” ಎಂದು ಕರೆ ನೀಡಿದರು.
ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಇ.ಎಲ್.ಸಿ. ನೋಡಲ್ ಅಧಿಕಾರಿಗಳಾದ ಪ್ರೊ.ಎಂ.ಬಿ.ರಜಪೂತ ಪ್ರಾಸ್ತಾವಿಕ ಮಾತನಾಡಿ ಪ್ರಜಾಪ್ರಭುತ್ವ ಯಶಸ್ಸಿಗೆ ಮತದಾನವೇ ಕಾರಣ, ಒಂದು ಮತ ದೇಶದ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ, ಒಂದೇ ಮತದಲ್ಲಿ ಸರ್ಕಾರಗಳೇ ಬದಲಾಗುವ ಸಾಧ್ಯತೆ ಇರುತ್ತದೆ. ನನ್ನದೊಂದು ಮತದಿಂದ ಏನಾಗುತ್ತದೆ ಎಂಬ ತಾತ್ಸಾರ ಮನೋಭಾವ ಬಿಟ್ಟು ಎಲ್ಲರೂ ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಬಂದೂಕಿನ ಬುಲೆಟ್ಟಿಗಿಂತ ಬ್ಯಾಲೆಟ್ (ಮತ) ಅತ್ಯಂತ ಶಕ್ತಿಶಾಲಿ ಎಂದು ಮತದ ಮಹತ್ವನ್ನು ವಿವರಿಸಿದರು.
ಪ್ರಾಚಾರ್ಯರಾದ ಶ್ರೀ ಚಿದಾನಂದ.ಬಿ.ನಾಟೀಕಾರ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪ್ರಸ್ತುತ ಸಂಕೀರ್ಣವಾದ ವಿಶ್ವದಲ್ಲಿ ಉತ್ತಮ ಸರಕಾರ ರಚನೆಯಾದರೆ ಮಾತ್ರ ಪ್ರಗತಿ ಸಾಧ್ಯ. ಹಾಗಾಗಿ ಪೌರರಿಗೆ ಮಾಹಿತಿ ನೀಡಲು ಇಂತಹ ಕಾರ್ಯಕ್ರಮಗಳು ಕಾಲೇಜು ಹಂತದಲ್ಲಿ ನಡೇಯಲೇಬೇಕು. 18 ವರ್ಷ ತುಂಬಿದ ತಕ್ಷಣ ಪ್ರತಿಯೊಬ್ಬರು ಫಾರ್ಮ-6 ನ್ನು ತುಂಬಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಎಂದು ಸಲಹೆ ನೀಡಿದರು.
ವೇದಿಕೆಯ ಮೇಲೆ ತಾಲೂಕಾ ಇ.ಎಲ್.ಸಿ ನೋಡಲ್ ಅಧಿಕಾರಿಗಳಾದ ಪ್ರೊ.ಎನ್.ಬಿ.ಪೂಜಾರಿ, ಪ್ರೊ.ಲಕ್ಷ್ಮೀನರಸಯ್ಯ, ಪ್ರೊ.ಎಸ್.ಎಸ್.ಸಿದರಡ್ಡಿ, ಶ್ರೀಮತಿ. ವಿಜಯಲಕ್ಷ್ಮೀ.ಹಿರೇಮಠ, ಶ್ರೀಮತಿ. ಭಾಗ್ಯಲಕ್ಷ್ಮೀ, ಶ್ರೀಮತಿ, ಕೆ.ಎ.ಹೊಸಟ್ಟಿ, ಉಪಸ್ಥಿತರಿದ್ದರು.
ಪ್ರೊ.ಆರ್.ಸಿ.ಹಿರೇಮಠ ಸ್ವಾಗತಿಸಿದರು, ಶ್ರೀಮತಿ.ಎಂ.ಎಸ್.ಮಾಲಿಪಾಟೀಲ ವಂದಿಸಿದರು, ಪ್ರೊ. ಎಸ್.ಸಿ.ತೋಳನೂರ ನಿರೂಪಿಸಿದರು,