ಜಿಲ್ಲಾಮಟ್ಟದ ಕವಿಗೋಷ್ಠಿ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರು,ಡಿ4: ಕರ್ನಾಟಕದಾದ್ಯಂತ ಇಡೀ ವರ್ಷ ಅತೀ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿರುವ ಕರ್ನಾಟಕ ಸಂಭ್ರಮ – 50 ರ ನಿಮಿತ್ತವಾಗಿ ಕಿತ್ತೂರಿನ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕವು ಜಿಲ್ಲಾ ಮಟ್ಟದ ವಿಶೇಷ ಕವಿಗೋಷ್ಠಿಯನ್ನು ಹಮ್ಮಿಕೊಂಡಿರುವದು ಸ್ವಾಗತಾರ್ಹ ಎಂದು ಹಿರಿಯ ಪತ್ರಕರ್ತ ಪ್ರದೀಪ ಮೇಲಿನಮನಿ ಹೇಳಿದರು.
ರಾಜಗುರು ಸಂಸ್ಥಾನ ಕಲ್ಮಠದ ಚಂದರಗಿ ಸಭಾ ಭವನದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಕಿತ್ತೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ಬೆಳಗಾವಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಅತಿಥಿಗಳಾಗಿ ಆಗಮಿಸಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದವರು.
ಕನ್ನಡ ಕಾವ್ಯಮಯವಾದ ಭಾಷೆ, ಕನ್ನಡವನ್ನು ಹೆಚ್ಚು ಹೆಚ್ಚಾಗಿ ಓದುವುದರಿಂದ ಕನ್ನಡ ಭಾಷೆ ಬೆಳೆಯುತ್ತದೆ ಎಂದ ಅವರು ಭಾಗವಹಿಸಲಿರುವ ಕವಿಗಳಿಗೆ ಶುಭ ಕೋರಿದರು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವೀರಭದ್ರ ಅಂಗಡಿ ಮಾತನಾಡಿ ಕನ್ನನಡ ಅಳಿವು ಉಳಿವಿಗಾಗಿ ಸರಕಾರಿ ಕನ್ನಡ ಶಾಲೆಗಳ ಗುಣಮಟ್ಟ ಕಾಯ್ದುಕೊಳ್ಳುವದು ಅತೀ ಅವಶ್ಯಕವಾಗಿದೆ. ಐತಿಹಾಸಿಕ ಕಿತ್ತೂರು ನಾಡಿನ ಹೆಸರು ಎಲ್ಲಿ ಇರಬೇಕಾಗಿತ್ತು ಅಲ್ಲಿ ಇಲ್ಲಾ ಎಂದು ಸರ್ಕಾರಗಳ ವಿರುದ್ದ ಹರಿಹಾಯ್ದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಚನ್ನಮ್ಮನ ಕಿತ್ತೂರಿನ ಗೌರವ ಕಾರ್ಯದರ್ಶಿ ಮಂಜುನಾಥ ಕಳಸಣ್ಣವರ ತಮ್ಮ ಆಶಯ ನುಡಿಯನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಡಾ.ಎಸ್.ಬಿ. ದಳವಾಯಿ ಈ ಕವಿಗೋಷ್ಠಿ ಹಮ್ಮಿಕೊಳ್ಳಲು ಸಹಕರಿಸಿದ ಎಲ್ಲ ಸ್ನೇಹಿತರನ್ನು ಅಭಿನಂದಿಸುತ್ತ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಕವಿಗಳು ಆಗಮಿಸಿರುವದಕ್ಕೆ ಸಂತಸ ವ್ಯಕ್ತ ಪಡಿಸಿದರು.
ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಕೇವಲ ಈ ಒಂದು ವರ್ಷ ಮಾತ್ರ ಕನ್ನಡ ಸಂಭ್ರಮಾಚರಣೆ ಅಗಿರದೆ ಪ್ರತಿ ದಿವಸ, ಪ್ರತಿ ವರ್ಷ ನಿರಂತರವಾಗಿ ಕನ್ಡಡ ಭಾಷೆಯ ಅರಿವನ್ನು ನಮ್ಮ ಮಕ್ಕಳಲ್ಲಿ ಬೆಳೆಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಅನೇಕ ಕನ್ನಡ ಶಾಲೆಗಳಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿರು ಇಂದಿನ ದಿನಮಾನದಲ್ಲಿ ಕಸಾಪ ಅಧ್ಯಕ್ಷ ಎಸ್ ಬಿ ದಳವಾಯಿ ಅವರು ಅಲ್ಲಿಗೆ ಕನ್ನಡವನ್ನು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಎಂದು ಆಶೀರ್ವಚನದಲ್ಲಿ ಹೇಳಿದರು.
ಕುಮಾರಿ ಕೃತಿ ರಾಘವೇಂದ್ರ ಇವರ ಕನ್ನಡ ಗೀತೆಯೊಂದಿಗೆ ಆರಂಭವಾದ ಕವಿಗೋಷ್ಠಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕವಿ ಕವಯತ್ರಿಯರು ಕವನ ವಾಚನ ಮಾಡಿದರು. ಕವನ ವಾಚನ ಮಾಡಿದ ಸರ್ವರಿಗೂ ಪ್ರಮಾಣ ಪತ್ರ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.
ಡಿಶಂಬರ ತಿಂಗಳ ಸಾಹಿತಿ ಸನ್ಮಾನದ ಅಂಗವಾಗಿ ಯುವ ಸಾಹಿತಿ ಮತ್ತು ಬೆಳಗಾವಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ನಾಗಯ್ಯ ಹುಲೆಪ್ಪನವರಮಠ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸುನಂದಾ ಜೋಷಿ ಪ್ರಾರ್ಥನ ಗೀತೆ ಹಾಡಿದರು, ಶಿಕ್ಷಕಿ ಸುನಂದಾ ಪಾಟೀಲ ಪ್ರಾರ್ಥಿಸಿದರು. ಕಸಾಪ ಮಹಿಳಾ ಪ್ರತಿನಿಧಿಗಳು ನಾಡಗೀತೆ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ತ ಕೋಶಾಧ್ಯಕ್ಷ ಮಹೇಶ್ವರ ಹೊಂಗಲ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ವ್ಹಿ.ಎಸ್. ನಂದೀಹಳ್ಳಿ ವಂದಿಸಿದರು. ಪ್ರಭಾ ಲದ್ದೀಮಠ ಮತ್ತು ಶೋಭಾ ಪಾಶ್ಚಾಪೂರ ನಿರೂಪಿಸಿದರು.
ಈ ವೇಳೆ ಕ್ಯೂರೇಟರ್ ರಾಘವೇಂದ್ರ, ಯುವ ಸಾಹಿತಿ ದಾನೇಶ ಸಾಣಿಕೊಪ್ಪ, ಚಂದ್ರಶೇಖರ ಸಾಣಿಕೊಪ್ಪ. ರಾಜು ಜಾಂಗಟಿ, ವಿವೇಕ ಕುರಗುಂದ ಸೇರಿದಂತೆ ಇತರಿದ್ದರು.