ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆ: 61.95 ಕೋಟಿ ಬಂಡವಾಳದ 10 ಘಟಕಗಳಿಗೆ ಅನುಮೋದನೆ


ಬಳ್ಳಾರಿ,ಜು.23- ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರ ಅದ್ಯಕ್ಷತೆಯಲ್ಲಿ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಗುರುವಾರ ನಡೆಯಿತು.
ಸಮಿತಿ ಸಭೆಯಲ್ಲಿ ವಿವಿಧ ಉತ್ಪನ್ನಗಳನ್ನು ತಯಾರಿಸುವ ಯೋಜನಾ ಘಟಕಗಳಾದ ಸಿಆರ್ ಕ್ವೈಲ್ಸ್ ಮತ್ತು ಎಚ್‍ಆರ್ ಕ್ವೈಲ್ಸ್ ಪ್ರೋಸೆಸಿಂಗ್ ಯೂನಿಟ್, ಮೈಕ್ರೋ ಸ್ಪಿಂಕ್ಲರ್ ಮತ್ತು ಹನಿ ನೀರಾವರಿ ಕಾಂಪೋನೆಂಟ್ಸ್ ಉತ್ಪಾದನೆ, ಕಾಟನ್ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್, ಯೆಲ್ಲೋ ಮಿಲ್ಲೆಟ್ ರೈಸ್ ಪ್ರೋಸೆಸಿಂಗ್, ಫುಡ್ ಗ್ರೈನ್ ಕ್ಲೀನಿಂಗ್ ಮತ್ತು ಗ್ರೇಡಿಂಗ್,ಗ್ರೌಂಡ್‍ನಟ್ ಡೆಕೋರಟಿಂಗ್, ರೈಸ್ ಹಸ್ಕ್ ಪ್ರೋಸೆಸಿಂಗ್, ರೈಸ್ ಮಿಲ್ಸ್ ಸೇರಿದಂತೆ ಇತರೆ 10  ಘಟಕಗಳಿಂದ ಹೂಡಿಕೆಯಾಗುವ ರೂ.61.95 ಕೋಟಿ ಬಂಡವಾಳದ ಘಟಕಗಳಿಗೆ ಅನುಮೋದನೆ ನೀಡಲಾಯಿತು. ಈ ಘಟಕಗಳಿಂದ 170 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್, ಚೇಂಬರ್ ಆಫ್ ಕಾಮರ್ಸ್‍ನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದ್ದರು.