ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವರಿಷ್ಠಾಧಿಕಾರಿ ವರ್ಗಾವಣೆ ಖಂಡಿಸಿ ಪ್ರತಿಭಟನೆ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ನ.05: ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಅನಿರುದ್ಧ್ ಶ್ರವಣ್ ಮತ್ತು ಜಿಲ್ಲಾ ವರಿಷ್ಠಾಧಿಕಾರಿಯಾದ ಡಾ. ಕೆ. ಅರುಣ್ ಅವರ ವರ್ಗಾವಣೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕರು ಮತ್ತು ಪದಾಧಿಕಾರಿಗಳು ಸೇರಿ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಅನಿರುದ್ದ್ ಶ್ರವಣ್ ಮತ್ತು  ಜಿಲ್ಲಾ ವರಿಷ್ಠಾಧಿಕಾರಿಯಾದ ಡಾ.ಕೆ ಅರುಣ್ ರವರು ಜನಪರ ಆಡಳಿತವನ್ನು ಕೈಗೊಂಡು ಅತ್ಯಂತ ಪಾರದರ್ಶಕ ಮತ್ತು ಸುವ್ಯವಸ್ಥಿತವಾಗಿ ಆಡಳಿತವನ್ನು ನೀಡುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ ಇವರ ವರ್ಗಾವಣೆಯನ್ನು ಮಾಡುವಂತಿಲ್ಲ ದಕ್ಷ ಅಧಿಕಾರಿಯಂದೇ ಹೆಸರುವಾಸಿಯಾಗಿ ಅತ್ಯಂತ ಸರಳ ಮತ್ತು ಭ್ರಷ್ಟ ಹಾಗೂ ಲಂಚ ಮುಕ್ತ ಆಡಳಿತವನ್ನು ನೀಡಿ ಯಶಸ್ವಿ ಯಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ, ಇವರ ವರ್ಗಾವಣೆ ಖಂಡಿಸಿ ಉಪತಹಶೀಲ್ದಾರರಾದ ನಾಗರಾಜ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎನ್ ಭರ್ಮಣ್ಣ, ವಕೀಲರಾದ ಹನುಮಂತಪ್ಪ, ಕೊಟ್ರೇಶಪ್ಪ, ನಾಗರಾಜ್, ಕೊಟ್ರೇಶ್, ಮೈಲಪ್ಪ, ಪರಶುರಾಮಪ್ಪ, ಹಾಗೂ ಪದಾಧಿಕಾರಿಗಳು, ಇನ್ನು ಮುಂತಾದವರು ಉಪಸ್ಥಿತರಿದ್ದರು.

One attachment • Scanned by Gmail