ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರಿಗೆ ಸನ್ಮಾನ

ಕಲಬುರಗಿ,ಜು.1-ಕಲಬುರಗಿ ಜಿಲ್ಲೆ ಸಾಹಿತ್ಯಿಕ, ಸಾಂಸ್ಕøತಿಕ, ಐತಿಹಾಸಿಕ, ಸಾಮಾಜಿಕ ಸೌಹಾರ್ದತೆಗೆ ಸಿರಿವಂತವಾಗಿದೆ. ಅವುಗಳ ಪರಿಚಯ, ಪ್ರಚಾರದ ಕೊರತೆ ಇದೆ ಎಂದು ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಹೇಳಿದರು.
ನೂತನವಾಗಿ ಕಲಬುರಗಿ ಜಿಲ್ಲಾಧಿಕಾರಿಯಾಗಿ ಬಂದಿರುವ ಫೌಜಿಯಾ ತರನ್ನುಮ್ ಅವರಿಗೆ ಸಂಘದ ಪದಾಧಿಕಾರಿಗಳೊಂದಿಗೆ ಸನ್ಮಾನಿಸಿ ಮಾತಾಡುತ್ತ, ತಾವು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಸಂದರ್ಭದಲ್ಲಿ ಕಸ ತುಂಬಿ ಮುಚ್ಚಿ ಹೊಗಿದ್ದ ನಗರದ 24 ಐತಿಹಾಸಿಕ ಬಾವಿಗಳನ್ನು ಸ್ವಚ್ಚಗೊಳಿಸಿ ಬಳಕೆಗೆ ಅನುಕೊಲ ಮಾಡಿಕೊಟ್ಟಿದ್ದೀರಿ. ಜಿಲ್ಲೆಯಾದ್ಯಂತ ಇರುವ ಅನೇಕ ಐತಿಹಾಸಿಕ ಬಾವಿ, ಕೆರೆಗಳು, ಸ್ಮಾರಕಗಳು, ದಿಗ್ಗಜ ಸಾಹಿತಗಳ ಊರುಗಳ ಅಭಿವೃದ್ಧಿ ಪಡಿಸಿ ಜಿಲ್ಲೆಯ ಸೊಬಗನ್ನು ಹೆಚ್ಚಿಸಬೇಕೆಂದು ಕೊರಿದರು.
ಜಿಲ್ಲಾಧಿಕಾರಿಗಳು ಮಾತನಾಡಿ ಪ್ರಯತ್ನ ಮಾಡೋಣ. ತಮ್ಮೇಲ್ಲರ ಸಲಹೇ ಸಹಕಾರ ಇರಲಿ ಎಂದರು.
ಸಂಘದ ಪದಾಧಿಕಾರಿಗಳಾದ ಶಿವಾಜಿ ಜಮಾದಾರ, ಶ್ರೀಕಾಂತ ಶೆಟ್ಟಿ ಶುಭಾಷ ಎಚ್ಚ್, ಮಹಾದೇವಪ್ಪ ನಾಡೇಪಲ್ಲಿ, ಶುಭಾಷ ದಿಗ್ಗಾಂವ,ಸುಧಾಬಾಯಿ, ಕವಿತಾಬಾಯಿ,ಕಮಲಾ, ಸೌಭಾಗ್ಯಮ್ಮ ರಾಣಪ್ಪ ಇತರರು ಉಪಸ್ಥಿತರಿದ್ದರು.