ಜಿಲ್ಲಾಧಿಕಾರಿ ಕಚೇರಿ ಮುಂದೆ ತಲೆ ಮೇಲೆ ಕಲ್ಲುಹೊತ್ತು ಪ್ರತಿಭಟನೆ

ತಾಳಿಕೋಟೆ:ಆ.4:ಡೋಣಿ ನಧಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೇಲ್ಮಟ್ಟದ ಸೇತುವೆಗೆ ಬಸ್ ನಿಲ್ದಾಣದ ವರೆಗೆ ನೇರ ರಸ್ತೆ ಕಲ್ಪಿಸಲು ಹಾಗೂ ಎರಡೂ ಬದಿಗೆ ಸರ್ವಿಸ್ ರಸ್ತೆಯನ್ನು ಮಾಡುವ ಸಲುವಾಗಿ ತಾಳಿಕೋಟೆ ಅಭಿವೃದ್ದಿ ಹೋರಾಟ ಸಮಿತಿ ನೇತೃತ್ವದಲ್ಲಿ ಇದೇ ದಿ.5 ರಂದು ತಾಳಿಕೋಟೆಯಿಂದ ವಿಜಯಪೂರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಪುರಸಭಾ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ತಿಳಿಸಿದರು

ಬುಧವಾರರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಹಡಗಿನಾಳ, ಮೂಕೀಹಾಳ, ಕಲ್ಲದೇವನಹಳ್ಳಿ, ಹರನಾಳ, ನಾಗೂರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಡೋಣಿ ಸೇತುವೆಗೆ ನೇರ ರಸ್ತೆ ನಿರ್ಮಿಸಲು ಮತ್ತು ಪುರಸಭೆಯಲ್ಲಿ ನಡೆದ ಅವ್ಯವಹಾರಗಳ ತನಿಖೆಗಾಗಿ ಈ ಹಿಂದೆ ಧರಣಿ ಸತ್ಯಾಗ್ರಹವನ್ನು ಕೈಗೊಳ್ಳಲಾಗಿತ್ತು ಆ ಸಮಯದಲ್ಲಿ ಅಧಿಕಾರಿಗಳು ಸೂಕ್ತ ಕ್ರಮದ ಲಿಖಿತ ಭರವಸೆ ನೀಡಿ 5 ತಿಂಗಳು ಘತಿಸಲು ಬಂದಿದೆ ಆದರೆ ಯಾವುದೇ ರೀತಿಯ ಕ್ರಮಗಳನ್ನು ಜರುಗಿಸಿಲ್ಲಾ ಹೀಗಾಗಿ ಇದೇ ದಿ.5 ರಂದು ತಾಳಿಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಿಜಯಪೂರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವರೆಗೆ ಪಾದಯಾತ್ರೆಯ ಮೂಲಕ ತೆರಳಿ ಅಲ್ಲಿ ಮನವಿಯನ್ನು ಸಲ್ಲಿಸಿ ತಲೆಯ ಮೇಲೆ ಕಲ್ಲುಹೊತ್ತು ಪ್ರತಿಭಟನೆ ನಡೆಸಲು ತಿರ್ಮಾನಿಸಲಾಗಿದೆ ಎಂದರು.

 ತಾಳಿಕೋಟೆ ಪುರಸಭೆಯಲ್ಲಿ ಭ್ರಷ್ಟಾಚಾರ ಹಾಗೂ ಅವ್ಯವಹಾರದ ತನಿಖೆಗಾಗಿ ಮತ್ತು ಜಿ+1 ಮಾದರಿ(ಆಶ್ರಯ) 600 ಮನೆಗಳ ಹಂಚಿಕೆಗೆ ಸಂಬಂದಿಸಿ ಮನೆ ಇಲ್ಲದ ಬಡವರು ಬಡ್ಡಿ ರೂಪದಲ್ಲಿ ಸಾಲ ಸೂಲ ಮಾಡಿ ಪುರಸಭೆಗೆ ಕೋಟ್ಯಾಂಟರ ರೂ. ಭರಣಾ ಮಾಡಿ 5 ವರ್ಷಗಳು ಘತಿಸುತ್ತಾ ಬಂದಿದ್ದು ಇತ್ತಕಡೆ ಮನೆಯೂ ಇಲ್ಲದೇ ಮತ್ತು ಹಣವನ್ನು ಕಳೆದುಕೊಂಡು ಮಾಡಿದ ಸಾಲದ ಬಡ್ಡಿಕಟ್ಟಲಾಗದೇ ಪರಿತಪಿಸುತ್ತಿದ್ದಾರೆ. ಈ ಕುರಿತು ತಾಳಿಕೋಟೆ ಅಭಿವೃದ್ದಿ ಹೋರಾಟ ಸಮಿತಿ ವತಿಯಿಂದ ಎರಡನೇ ಹಂತದ ಹೋರಾಟದಲ್ಲಿ ಹೋರಾಟದ ಸ್ವರೂಪವನ್ನು ಬದಲಿಸಿಕೊಂಡು ದಿನಾಂಕ : 05-08-2022 ರಂದು ಶುಕ್ರವಾರರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಡಾ.ಬಾಬಾಸಾಹೇಬ ಅಂಬೇಡ್ಕರ್ ಸರ್ಕಲ್‍ದಿಂದ ಪಾದಯಾತ್ರೆಯ ಮೂಲಕ ಪ್ರತಿಭಟನೆ ಪ್ರಾರಂಬಿಸಿ ದಿನಾಂಕ : 08-08-2022 ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ತಲೆಯ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಲಾಗುವದೆಂದರು.

ಕಾರಣ ತಾಳಿಕೋಟೆ ಪಟ್ಟಣದ ನಾಗರಿಕರು, ವ್ಯಾಪಾರಸ್ಥರು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಹಾಗೂ ಸುತ್ತ-ಮುತ್ತಲಿನ ಗ್ರಾಮೀಣ ಭಾಗದ ನಾಗರಿಕರು, ನಾನು ಈ ಹಿಂದೆ ನಾನು ಕೈಗೊಂಡ ಪ್ರತಿ ಹೋರಾಟಕ್ಕೆ ಬೆಂಬಲಿಸುತ್ತಾ ಬಂದಂತೆ ಈ ಭಾರಿ ಕೈಗೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸಿ ನನ್ನ ಹೋರಾಟಕ್ಕೆ ಬೆಂಬಲಿಸಿ ಹೋರಾಟ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆಂದು ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ತಿಳಿಸಿದರು.

ಈ ಸಮಯದಲ್ಲಿ ಸುರೇಶಕುಮಾರ ಹಜೇರಿ, ನದೀಂ ಕಡು, ಪತ್ತೇಅಹ್ಮದ ನಾಯ್ಕೋಡಿ, ಸುರೇಶ ಹಜೇರಿ, ರವಿ ಕಟ್ಟಿಮನಿ, ಶಿವರಾಜ ಗುಂಡಕನಾಳ, ಸುಭಾಸ ಗೌಡಗೇರಿ, ನಿಂಗನಗೌಡ ದೇಸಾಯಿ, ರಮೇಶ ಮೋಹಿತೆ, ಮೊದಲಾದವರು ಇದ್ದರು.


   ನಾನು ಕೈಗೊಂಡಿರುವ ಈ ಹೋರಾಟ ಯಾವ ವ್ಯಕ್ತಿಯ ವಿರೂದ್ದವೂ ಅಲ್ಲಾ ಮತ್ತು ಯಾವುದೇ ವ್ಯಕ್ತಿಯನ್ನು ತೇಜೋವಧೆ ಮಾಡುವ ಉದ್ದೇಶ ಹೊಂದಿಲ್ಲಾ ಕೇವಲ ಪಟ್ಟಣದ ಅಭಿವೃದ್ದಿಗೋಸ್ಕರ್ ಕೈಗೊಂಡ ಹೋರಾಟ ಇದಾಗಿದೆ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

                               ಪುರಸಭಾ ಸದಸ್ಯರು ತಾಳಿಕೋಟೆ