ಜಿಲ್ಲಾಧಿಕಾರಿ ಅಕ್ರಂಪಾಷರಿಗೆ ಸನ್ಮಾನ

ಕೋಲಾರ,ಜೂ.೨೮- ಕೋಲಾರ ಜಿಲ್ಲಾಡಳಿತ ಕಚೇರಿ ಮುಂಬಾಗದ ವೇದಿಕೆಯಲ್ಲಿ ನೂತನ ಜಿಲ್ಲಾಧಿಕಾರಿ ಅಕ್ರಂಪಾಷ ಅವರನ್ನು ಕರ್ನಾಟಕ ದಲಿತಕ್ರಿಯಾ ಸಮಿತಿ ವತಿಯಿಂದ ಕೋಲಾರ ಜಿಲ್ಲೆಗೆ ಆತ್ಮೀಯವಾಗಿ ಸ್ವಾಗತಿಸಿ, ಶಾಲು ತುರಾಯಿ ಮತ್ತು ಹಾರ ತೊಡಿಸಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಕ್ರಿಯಾ ಸಮಿತಿಯ ರಾಜ್ಯ ಸಂಚಾಲಕ ಡಾ:ಎಂ.ಚಂದ್ರಶೇಖರ್ ಡಿ.ಲಿಟ್. ಮಾತನಾಡಿ ರಾಜ್ಯ,ರಾಷ್ಟ್ರ, ಅಂತರರಾಷ್ಟ್ರೀಯ ಪ್ರಶಸ್ತಿಗಳ ಪುರಸ್ಕೃತರು ಕೋಲಾರ ಜಿಲ್ಲೆಯಲ್ಲಿ ಅನೇಕ ದಲಿತರ ಜ್ವಲಂತ ಸಮಸ್ಯೆಗಳಿದ್ದು, ಇವುಗಳಿಗೆ ಹೆಚ್ಚಿನ ಗಮನಹರಿಸಿ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಸಮಾನತೆಯನ್ನು ಆಡಳಿತದಲ್ಲಿ ಅನುಷ್ಟಾನಕ್ಕೆ ಹೆಚ್ಚಿನ ಗಮನಹರಿಸಬೇಕೆಂದು ವಿನಯಪೂರ್ವಕವಾಗಿ ವಿನಂತಿಸಿದರು ಮತ್ತು ತನ್ನ ಸಮಿತಿಯು ಜಿಲ್ಲಾಡಳಿತಕ್ಕೆ ಹಾಗೂ ತಮ್ಮ ದಕ್ಷತೆಗೆ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡುವುದಾಗಿ ಸಮಿತಿಯ ಪರವಾಗಿ ತಿಳಿಸಿದರು ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ನಿಸ್ಪಕ್ಷಪಾತವಾದ ದಕ್ಷ ಆಡಳಿತವನ್ನು ಜಿಲ್ಲೆಯ ಪ್ರಗತಿಗಾಗಿ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಕ್ರಿಯಾ ಸಮಿತಿಯ ಸಂಚಾಲಕರುಗಳಾದ ವಿ.ಚಲಪತಿ, ಕೆ.ಜಿ.ಎಫ್.ಡಿ.ಎಂ. ಗುರುಪ್ರಸಾದ್ ಮಾಲೂರು, ಆರ್.ಕೆಂಚಪ್ಪ ಬಡಮಾಕನಹಳ್ಳಿ, ಕಲ್ಲಂಡೂರು ವೆಂಕಟೇಶ್, ನಾಗರಾಜ್, ರಾಮಪ್ಪ, ಶತೃಜ್ಞ, ತಾಯಲೂರು ವಿ.ಶ್ರೀನಿವಾಸ್, ಕೆ.ಶ್ರೀನಿವಾಸ್, ಮದ್ದೇರಿ ಮುನಿರತ್ನಂ ಇನ್ನೂ ಅನೇಕ ದಲಿತ ಕ್ರಿಯಾ ಸಮಿತಿಯ ಸದಸ್ಯರು ಭಾಗವಹಿಸಿದರು.