ಜಿಲ್ಲಾಧಿಕಾರಿಯಿಂದ ಸಿಂಗಟಾಲೂರು ಡ್ಯಾಮ್ ವೀಕ್ಷಣೆ

ಗದಗ,ಮೇ29 : ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಜಿಲ್ಲೆಯ ಸಿಂಗಟಾಲೂರು ಡ್ಯಾಮ್ ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಹಾಗೂ ಸಿಂಗಟಾಲೂರು ಡ್ಯಾಮಿನ ನೀರು ಎಲ್ಲಿಯು ಅನಗತ್ಯ ಪೆÇಲಾಗದಂತೆ ನೀರು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಿಂಗಟಾಲೂರು ಡ್ಯಾಮ್‍ನ ನೀರನ್ನು ಕುಡಿಯಲು ಮಾತ್ರ ಬಳಕೆಯಾಗುವಂತೆ, ಯಾವುದೇ ರೀತಿಯಲ್ಲಿ ರೈತರು ಬೊರವೆಲ್, ಪಂಪ್‍ಸೆಟ್ ಮೂಲಕ ಡ್ಯಾಮಿನ ನೀರನ್ನು ತೆಗೆಯದಂತೆ ನೋಡಿಕೊಳ್ಳಲು ಹಾಗೂ ಕುಡಿಯುವ ನೀರಿನಲ್ಲಿ ಯಾವುದೇ ತರಹದ ಕೊರತೆಯಾಗದಂತೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತ ಪ್ರಶಾಂತ ವರಗಪ್ಪನರ, ನಗರಸಭೆಯ ಇಂಜಿನಿಯರ್ ಎಚ್.ಬಂಡಿವಡ್ಡರ, ತಹಶೀಲ್ದಾರ್ ಧನಂಜಯ್, ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.