ಜಿಲ್ಲಾಧಿಕಾರಿಯಿಂದ ವಿದ್ಯಾರ್ಥಿನಿ ಕಾಶೀಪಾಗೆ ಸನ್ಮಾನ

ಮಾನ್ವಿ,ಜೂ.೦೭-
ಎಸ್‌ಎಸ್‌ಎಸ್‌ಸಿ ಮರು ಮೌಲ್ಯಮಾಪನದಲ್ಲಿ ೬೨೫/೬೨೪ ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮೀರ್ ಲಿಯಾಖತ್ ವಕೀಲರ ಮಗಳಾದ ಕು. ಕಾಶೀಫಾ ತಜರೀನ್ ವಿದ್ಯಾರ್ಥಿನಿಗೆ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ್ ಇವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.
ಕಳೆದ ತಿಂಗಳಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ಸಮಯದಲ್ಲಿ ಪಟ್ಟಣದ ಕಾಕತೀಯ ಶಾಲೆಯ ವಿದ್ಯಾರ್ಥಿನಿ ಕು,ಕಾಶೀಫಾ ತಜರೀನ್ ತಂದೆ ಮೀರ್ ಲಿಯಾಖತ್ ಅಲಿ ವಕೀಲರು ಇವರು ೬೨೫/೬೨೦ ಅಂಕಗಳನ್ನು ಪಡೆದಲಾಗಿತ್ತು ಇದಕ್ಕೆ ಸಂಬಂಧಿಸಿದಂತೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗಿತ್ತು ನಿನ್ನೆ ಬಂದಿರುವ ಫಲಿತಾಂಶದಲ್ಲಿ ವಿದ್ಯಾರ್ಥಿನಿ ೬೨೫ ಕ್ಕೆ ೬೨೪ ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವೀತಿಯ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆಯಲಾಗಿದ್ದು ಶಾಲೆಗೆ, ತಾಲೂಕಿಗೆ, ಕುಟುಂಬಕ್ಕೆ, ಬಹಳ ಮುಖ್ಯವಾಗಿ ಶಿಕ್ಷಕರಿಗೆ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ತಂದೆ ಲಿಯಾಖತ್ ವಕೀಲರು ಹಾಗೂ ಕುಟುಂಬಸ್ಥರು ಸಂತೋಷವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ವೃಷಬೇಂದ್ರಯ್ಯ ಸ್ವಾಮಿ ಉಪನಿರ್ದೇಶಕರು ರಾಯಚೂರು, ಚಂದ್ರಶೇಖರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾನವಿ, ಶ ಚಂದ್ರಶೇಖರ್ ಬಿ ರಾಯಚೂರು, ಹುಂಬಣ್ಣ ರಾಥೋಡ್ ಲಿಂಗಸ್ಗೂರು, ಸುಖದೇವ್ ೞಒ॒ ದೇವದುರ್ಗ, ಎಂಎ ಯೂನುಸ್ ಮಾನವಿ, ಪರೀಕ್ಷಾ ಕೇಂದ್ರದ ಮುಖ್ಯಾಧೀಕ್ಷಕರು ,ಜಿಲ್ಲಾ ನೋಡಲ್ ಅಧಿಕಾರಿಗಳು ಎಂಹೆಚ್ ನಾಯಕ ಉಪಸ್ಥಿತರಿದ್ದರು.