ಜಿಲ್ಲಾಧಿಕಾರಿಯಿಂದ ಜಂತುಹುಳು ನಿವಾರಣ ದಿನ ಆಚರಣೆ

ಮೈಸೂರು,ಮೇ.28:- ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಬ್ಲಾಕ್ ಫಂಗಸ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲೆಯಲ್ಲಿ ‘ಜಂತುಹುಳು ನಿವಾರಣ ದಿನ’ವನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬ್ಲಾಕ್ ಫಂಗಸ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಚಾಮುಂಡಿಪುರಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಮನೆ ಮನೆಗೆ ತೆರಳಿ ಜಂತುಹುಳು ನಿವಾರಣ ಮಾತ್ರೆಯನ್ನು ವಿತರಿಸಿದರು.
ಶುಕ್ರವಾರ ಚಾಮುಂಡಿಪುರಂ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದಲ್ಲಿಯೇ 6 ಸಾವಿರ ಡಯಾಬಿಟಿಸ್ ಇರುವವರು ಇದ್ದಾರೆ ಎಂದು ತಿಳಿಸಿದರು. ಕೋವಿಡ್ ನಿಂದ ಇತ್ತೀಚೆಗೆ ಗುಣಮುಖರಾದ, ಡಯಾಬಿಟಿಸ್ ಇರುವವರಿಗೆ ಹಾಗೂ ಕೋಮಾರ್ಬಿಡಿಟಿಸ್ ಇರುವಂತರಲ್ಲಿ ಈ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಇವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಮಟ್ಟದಲ್ಲಿ ಇರುವುದರಿಂದ ಅವರು ಬೇಗ ಈ ಬ್ಲಾಕ್ ಫಂಗಸ್ ತುತ್ತಾಗಬಹುದು ಎಂದರು.
ಕಳೆದೊಂದು ವಾರದಿಂದ ಕಾಣಿಸದ ಬ್ಲಾಕ್ ಫಂಗಸ್ ಪ್ರಕರಣ ಇಂದಿಗೆ 45ಕ್ಕೆ ತಲುಪಿದೆ. ಹೀಗಾಗಿ ನಿರ್ಲಕ್ಷ್ಯ ಮಾಡಬಾರದು. ಬ್ಲಾಕ್ ಫಂಗಸ್ ಗೆ ಚಿಕಿತ್ಸೆ ಪಡೆದರೆ ಗುಣಮುಖವಾಗಲು ಧೀರ್ಘಾವಧಿ ಬೇಕಾಗುತ್ತದೆ ಹಾಗೂ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹೇಳಿದರು.