ಜಿಲ್ಲಾಧಿಕಾರಿಗೆ ಮನವಿ

ಗದಗ,ಜೂ14: ದೇಶದಲ್ಲೇ ಪ್ರಥಮ ಖ್ಯಾತಿಯ ಜನತಾ ಸದನ ಎಂಬ ವಿಶಿಷ್ಠ ಅಧಿವೇಶದನಲ್ಲಿ ಗದಗ ಮತಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ತೆಗೆದುಕೊಂಡ ನಿರ್ಣಯದಂತೆ ಜನತಾ ಸದನ ಸಭಾ ನಾಯಕ ಅನೀಲ್ ಮೆಣಸಿನಕಾಯಿ ನೇತೃತ್ವದಲ್ಲಿ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಜನತಾ ಸನದನ ಸದಸ್ಯರು ಮನವಿ ಸಲ್ಲಿಸಿದರು.
ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಗಾಣಿಗ ಭವನದಲ್ಲಿ ಏರ್ಪಡಿಸಲಾಗಿದ್ದ ಗದಗ ಶಹರ ಮತ್ತು ಗ್ರಾಮೀಣ ಭಾಗದಲ್ಲಿ ಬಹಳಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳ ಕುರಿತು ಜನತಾ ಸದನದ ಶಾಸಕರು, ಸಾರ್ವಜನಿಕರು ಪ್ರಸ್ತಾಪಿಸಿದ್ದ ವಿಷಯಗಳ ಬಗ್ಗೆ ವಿಸ್ತ್ರತವಾಗಿ ಚರ್ಚಿಸಿ ಈ ಕುರಿತು ಠರಾವು ಮಾಡಲಾಗಿತ್ತು.
ಗದಗ ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೂ ನಳ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯು ಸರಿಯಾಗಿ ಹಾಗೂ ಸಮರ್ಪಕವಾಗಿ ಜಾರಿಯಾಗದಿರುವುದು, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡದಿರುವುದು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಜಮೀನು ನೀಡಿದ ರೈತರಿಗೆ ಪರಿಹಾರ ಕೊಡದಿರುವುದು, ಹುಲಕೋಟಿಯಲ್ಲಿರುವ ರೈತ ಸಂಪರ್ಕ ಕೇಂದ್ರವನ್ನು ಗದುಗಿಗೆ ವರ್ಗಾಯಿಸುವುದು ಹಾಗೂ ಜನವಸತಿ ಸಭೆಗಳನ್ನು ಜಾರಿಗೆ ತರುವ ಬಗ್ಗೆ ಜನತಾ ಸದನದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದರಂತೆ, ಜನತಾ ಸದನದಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಮನವಿ ಮಾಡಿಕೊಳ್ಳಲಾಯಿತು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜನತಾ ಸದನದ ಸಭಾಧ್ಯಕ್ಷರಾದ ಡಾ.ಶೇಖರ್ ಸಜ್ಜನ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯ ಅನೀಲ್ ಅಬ್ಬಿಗೇರಿ, ನಾಗರಾಜ್ ತಳವಾರ, ಮುಖಂಡರಾದ ರವಿಕಾಂತ್ ಅಂಗಡಿ, ಶಿವರಾಜಗೌಡ ಹಿರೇಮನಿಪಾಟೀಲ್, ಅಶೋಕ ಕರೂರ, ವಸಂತ ಪಡಗದ, ಚಂದ್ರಶೇಖರ ಹರಿಜನ, ಪರಮೇಶ್ ನಾಯಕ್, ಪ್ರಭು ಪಾಟೀಲ್, ಉಡಚಪ್ಪ ಹಳ್ಳಿಕೇರಿ, ಮುತ್ತಣ್ಣ ಗದುಗಿನ, ರಮೇಶ್ ಸಜ್ಜಗಾರ, ಚಾಂದಸಾಬ ಕೊಟ್ಟೂರ, ಡಿ.ಬಿ.ಕರೀಗೌಡ್ರ, ರೇಖಾ ಬಂಗಾರಶೆಟ್ಟರ, ಸ್ವಾತಿ ಅಕ್ಕಿ, ಗೀತಾ ಬಸವಾ ಸೇರಿದಂತೆ ಹಲವರಿದ್ದರು.