ಜಿಲ್ಲಾಧಿಕಾರಿಗಳ ಸೈಕಲ್ ಜಾಥಾಕ್ಕೆ ಚಾಲನೆ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಜ.16: ಜಿಲ್ಲಾಧಿಕಾರಿಗಳಾದ  ಎಂ. ಎಸ್. ದಿವಾಕರ್ ಸೈಕಲ್ ಜಾತಕ್ಕೆ ಚಾಲನೆ ನೀಡಿದರು. ಇಂದು ಪಟ್ಟಣದಲ್ಲಿ ಜಿಲ್ಲಾಧಿಕಾರಿಗಳ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದರ ಪೂರ್ವದಲ್ಲಿ ಪಟ್ಟಣದ ಗಾಂಧಿ ಸರ್ಕಲ್ ಬಳಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. ನಂತರ ನಗರದ ನಾನಾ ಭಾಗಗಳಲ್ಲಿ ಸಂಚರಿಸಿ, ಪಟ್ಟಣದ ರಸ್ತೆ ಬದಿ ವ್ಯಾಪಾರಿಗಳಲ್ಲಿ ಸ್ವಚ್ಛತೆಯ  ಬಗ್ಗೆ ಅರಿವು ಮೂಡಿಸಿದರು.
 ನಂತರ ಗ್ರಾಮೀಣ ಪ್ರದೇಶದಿಂದ ಹಾಲು, ಮೊಸರು ತರುವವರ ಬಗ್ಗೆ ಆರೋಗ್ಯವನ್ನು ವಿಚಾರಣೆ  ಮಾಡಿದರು.
ತದನಂತರ ಊರಮ್ಮ ದೇವಸ್ಥಾನ, ಶ್ರೀ ಗುರುಕೊಟ್ಟೂರೇಶ್ವರ ದೇವಸ್ಥಾನ,  ಗಚ್ಚಿನಮಠ,  ಆಂಜನೇಯ ದೇವಸ್ಥಾನ ಇತರೆ ದೇವಾಲಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು.
ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ಕುಂದು ಕೊರತೆಗಳ ಬಗ್ಗೆ ವಿಚಾರಣೆ ಮಾಡಿದರು.
ಈ ಸೈಕಲ್ ಜಾತವು ಪಟ್ಟಣದ ಅನೇಕ ಭಾಗಗಳಲ್ಲಿ ಸಂಚರಿಸಿ ಮರಿಕೊಟ್ಟೂರೇಶ್ವರ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಅಮರೇಶ್ ಜಾಲಹಳ್ಳಿ, ಪ.ಪಂ. ಮುಖ್ಯಾಧಿಕಾರಿಯಾದ ನಸರುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.