ಜಿಲ್ಲಾಧಿಕಾರಿಗಳ ಆದೇಶ ನಿಯಮ ಉಲ್ಲಂಘಿಸಿ ಬಾರಿ ವಾಹನಗಳ ಸಂಚಾರ

ಹನೂರು ಜ.08:- ತಾಲೂಕಿನ ರಾಮಾಪುರ ನಾಲ್ ರೋಡ್ ಗರಿಕೆಕಂಡಿ ಮಾರ್ಗವಾಗಿ ಮತ್ತು ತಾಳಬೆಟ್ಟದಿಂದ ಪಾಲರ್ ಮೂಲಕ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿ ಅಧಿಕ ಭಾರ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿಗಳು ಆದೇಶಕ್ಕೆ ಕವಡೆ ಕಾಸಿನ ಬೆಲೆ ಇಲ್ಲ! ಆದೇಶ ನೀಡಿದ್ದರು ಸಹ ನಿಯಮ ಉಲ್ಲಂಘನೆ ಮಾಡಿ ಅಧಿಕ ಭಾರ ವಾಹನಗಳು ಸಂಚರಿಸಲು ಬಿಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಮಿತಿ ಅಧ್ಯಕ್ಷ ಲಕ್ಷ್ಮಿ ಮಹೇಶ್ ಆರೋಪ ಮಾಡಿದ್ದಾರೆ.
ರಾಜ್ಯ ಹೆದ್ದಾರಿ 79ರ ಪಾಲರ್ ರಾಮಪುರ ಹಂದಿಯೂರು ಮುಖ್ಯ ರಸ್ತೆಯಲ್ಲಿ ಬರುವ ನಾಲ್ ರೋಡ್ ಜಂಕ್ಷನ್ ನಿಂದ ಗರಿಕೆ ಕಂಡಿ ಮೂಲಕ ತಮಿಳುನಾಡು ಕಡೆಗೆ ಹೋಗುವ ಮತ್ತು ತಮಿಳುನಾಡು ಕಡೆಯಿಂದ ಗರಿಕೆ ಕಂಡಿ ಮೂಲಕ ರಾಜ್ಯಕ್ಕೆ ಬರುವ ರಸ್ತೆಯಲ್ಲಿ ಆರಕ್ಕಿಂತ ಹೆಚ್ಚಿನ ಚಕ್ರಗಳನ್ನು ಹೊಂದಿರುವ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರು ಗ್ರಾಮಸ್ಥರಿಗೆ ಅನುಕೂಲ ವಾಗುವಂತೆ ಅಗತ್ಯ ವಸ್ತುಗಳ ಸರಕು ಸಾಗಣೆ ವಾಹನಗಳು ಅಗ್ನಿಶಾಮಕ ವಾಹನ ಆಂಬುಲೆನ್ಸ್ ವಾಹನ ರಾಜ್ಯ ಹಾಗೂ ಅವರ ರಾಜ್ಯದ ಸಾರ್ವಜನಿಕ ವಾಹನಗಳಾದ ಸರಕಾರಿ ಮತ್ತು ಖಾಸಗಿ ಬಸ್ ಗಳು ಇತರೆ ಎಲ್ಲಾ ರೀತಿಯ ಲಘು ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶವಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹನೂರು ತಾಲೂಕಿನ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಹೋಗುವ ಮತ್ತು ತಮಿಳುನಾಡಿನಿಂದ ರಾಜ್ಯಕ್ಕೆ ಪಾಲಾರ್ ಮೂಲಕ ಬರುವ ಬಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಎಲ್ಲಾ ಮಾದರಿಯ ವಾಹನಗಳು ರಾಜ್ಯ ಹೆದ್ದಾರಿ 79 ರಲ್ಲಿ ಬರುವ ರಾಮಾಪುರ ಹಂದಿಯವರು ಮುಖ್ಯರಸ್ತೆಯಲ್ಲಿ ತಮಿಳುನಾಡಿಗೆ ಸಂಚರಿಸುತ್ತಿದ್ದು ಈ ರಸ್ತೆಯು ಅರಣ್ಯ ಪ್ರದೇಶದಿಂದ ಕೂಡಿದ್ದು ತುಂಬಾ ಕಿರಿದಾಗಿರುತ್ತದೆ ಮತ್ತು ತೀವ್ರವಾದ ತಿರುವುಗಳಿಂದ ಕೂಡಿದ್ದು ಬೆಟ್ಟಗುಡ್ಡಗಳಿಂದ ಆವೃತವಾಗಿದೆ.
ಬಾರಿ ವಾಹನಗಳ ಸಂಚಾರದಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆಯಾಗಿ ಅಪಘಾತಗಳು ಸಂಭವಿಸಿ ಬಾರಿ ಪ್ರಮಾಣದಲ್ಲಿ ಪ್ರಾಣ ಹಾಗುವ ಸಾಧ್ಯತೆ ಇರುವುದರಿಂದ ಹಾಗೂ ತುರ್ತು ವಾಹನಗಳ ಸುಗಮ ಸಂಚಾರವು ಕಷ್ಟವಾಗುವುದರಿಂದ ಈ ಆದೇಶ ಹೊರಡಿಸಲಾಗಿದೆ ಆದರೂ ನಿಯಮ ಉಲ್ಲಂಘನೆ ಮಾಡಿ ಅಧಿಕ ಭಾರ ವಾಹನಗಳು ಸಂಚರಿಸಲು ಅವಕಾಶ ಮಾಡಲಾಗಿದೆ.
ಸೇಲಂ ಮತ್ತು ಈರೋಡ್ ಕಡೆಯಿಂದ ಲಘು ವಾಹನಗಳು ಹಂದಿಯೂರು ಹಾಗೂ ಗೋವಿಂದ ಪಾಡಿಯಿಂದ ಪಾಲರ್ ಚಕ್ ಪೆÇೀಸ್ಟ್ ಮತ್ತು ನಾಲ್ ರೋಡ್ ಜಂಕ್ಷನ್ ಗರಿಕೆ ಕಂಡಿ ಚೆಕ್ ಪೆÇೀಸ್ಟ್ ಮುಖಾಂತರ ಲಘು ವಾಹನ ಸಂಚಾರ ದಟ್ಟಣೆಯಾಗಿದೆ ಇದನ್ನು ನಿಯಂತ್ರಿಸು ನಿಯೋಜನೆ ಮಾಡಿರುವ ಪೆÇಲೀಸ್ ಇಲಾಖೆ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಅಧಿಕ ಭಾರವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.
ಅಧಿಕ ಬಾರದ ಆರು ಚಕ್ರ ಕಿಂತ ಜಾಸ್ತಿ ಸರಕು ಸಾಗಣಿಕೆ ಲಾರಿ ಬಂದಂತಹ ಸಂದರ್ಭಗಳಲ್ಲಿ ಜನಸಂದಣಿ ಇಲ್ಲದ ವೇಳೆ ಹಾಗೂ ರಾತ್ರಿಯ ಸಮಯಗಳಲ್ಲಿ ಕದ್ದು ಮುಚ್ಚಿ ವಾಹನಗಳನ್ನು ಬಿಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳುಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶ ನೀಡಬೇಕು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.