ಜಿಲ್ಲಾಧಿಕಾರಿಗಳಿಂದ ಮಳಖೇಡ್ ಕಾಗಿಣಾ ನದಿ ಸೇತುವೆ ವೀಕ್ಷಣೆ

ಕಲಬುರಗಿ,ಜು.30: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ರವಿವಾರ ಸಹ ಜಿಲ್ಲೆಯಲ್ಲಿ ಮಳೆಯಿಂದ ಬಾಧಿತ‌ ಪ್ರದೇಶಗಳ ವೀಕ್ಷಣೆ ಕಾರ್ಯ ಮುಂದುವರೆಸಿದ್ದಾರೆ.

ಇತ್ತೇಚೆಗೆ ಭಾರಿ ಮಳೆಯಿಂದ ರಸ್ತೆ ಸಂಪರ್ಕ ಕಡಿತವಾಗಿದ್ದ ಸೇಡಂ ತಾಲೂಕಿನ ಮಳಖೇಡ್ ಬಳಿ ಕಾಗಿಣಾ ಸೇತುವೆ‌ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವೀಕ್ಷಿಸಿದರು. ಇದಲ್ಲದೆ‌ ಹಳೇ ಸೇತುವೆ ಪಕ್ಕದಲ್ಲಿ ಕೆ.ಆರ್.ಐ.ಡಿ.ಎಲ್. ಸಂಸ್ಥೆಯಿಂದ ನಿರ್ಮಿಸಲಾದ ಹೊಸ ಸೇತುವೆ ಕಾಮಗಾರಿ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಸಂಗಾವಿ ಗ್ರಾಮದ‌ ಬ್ರಿಡ್ಜ್ ಕಂ ಬ್ಯಾರೇಜು ಸಹ ವೀಕ್ಷಣೆ‌ ಮಾಡಿದರು.

ಇದಕ್ಕು ಮುನ್ನ ಮಳಖೇಡ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಶಿಥಿಲಾವಸ್ಥೆಯಲ್ಲಿರುವ ಶಾಲೆ ಕುರಿತು ಬಿ.ಇ.ಓ ಅವರನ್ನು ಪ್ರಸ್ನಿಸಿದರು. 2022-23ನೇ ಸಾಲಿನ ವಿವೇಕ ಯೋಜನೆಯಡಿ ಈ ಶಾಲೆಯಲ್ಲಿ 5 ಕೊಠಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ ಎಂದು ಬಿ.ಇ.ಓ ತಿಳಿಸಿದರು. ಕೂಡಲೆ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಡಿ.ಸಿ. ಸೂಚಿಸಿದರು.

ಸಹಾಯಕ ಆಯುಕ್ತ ಅಶಪ್ಪ, ತಹಶೀಲ್ದಾರ ಸೈಯದ್ ಶಾವಲಿ, ತಾಲೂಕ ಪಂಚಾಯತ್ ಇ.ಓ ನೀಲಗಂಗಾ ಬಬಲಾದ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.