ಜಿಲ್ಲಾಧಿಕಾರಿಗಳಿಂದ ಮತಗಟ್ಟೆ ಅಧಿಕಾರಿಗಳಿಗೆ ಕಿಟ್ ವಿತರಣೆ

ಶಹಾಪುರ: ಮಾ.16:ಶಹಾಪುರ ಮತಕ್ಷೇತ್ರದ ವ್ಯಾಪ್ತಿ ಯಲ್ಲಿ ಬರುವ ಮತಗಟ್ಟೆ ಅಧಿಕಾರಿಗಳಿಗೆ ಯಾದಗಿರಿ ಜಿಲ್ಲಾಧಿಕಾರಿಗಳಾದ ಸ್ನೇಹಲ್ ಆರ್ ರವರು ಕಿಟ್ ವಿತರಣೆ ಮಾಡಿದರು. ಒಟ್ಟು ಶಹಾಪುರ ಮತಕ್ಷೇತ್ರದ 265 ಅಲ್ಲದೆ ದೂರನಳ್ಳಿ ಮತಗಟ್ಟೆಯ 50 ಜನರಿಗೆ ಕಿಟ್ ನೀಡಲಾ ಯಿತು.ಪ್ರತಿ ಕಿಟ್‍ನಲ್ಲಿ ಒಂದು ನೋಟ್ ಬುಕ್ ಡೈರಿ. ಸ್ಟೇಲ್ 1 ಕ್ಯಾಪ್. 2 ಪೆನ್ಸಿಲ್, ಒಂದು ರಬ್ಬರ್ 2 ಪೆನ್ ಒಳಗೊಂಡ ಈ ಕಿಟ್ ಬ್ಯಾಗ ದಲ್ಲಿವೆ. ಮುಂಬರುವ ವಿಧಾನಸಭಾ ಚುನಾವ ‘ಣೆಯ ಮುಂಜಾಗ್ರತಾ ತಯ್ಯಾರಿಯಲ್ಲಿ ಜಿಲ್ಲಾಧಿಕಾರಿಗಳು ಭಿ,ಗುಡಿ ಅಡಿಟೋರಿಯಲ್ಲ ಹಾಲ್ ನಲ್ಲಿ ಈ ಕಿಟ್ ನೀಡಿ ಮಾತನಾಡಿದರು. ಸಾಹಾಯಕ ಆಯುಕ್ತರಾದ ಸೆಮಸಲಾಂ, ಹುಸೇನಿ, ಶಹಾಪುರ ತಹಿಸಲ್ದಾರರಾದ ಉಮಾಕಾಂತ ಹಳ್ಳಯವರು ಸೇರಿದಂತೆ ಉಪ ತಹಿಸಿಲ್ದಾರರು. ಕಂದಾಯ ಅಧಿಕಾರಿಗಳು ಸಿಬ್ಬಂದಿಯವರು ಹಾಜರಿದ್ದರು.