ಜಿಲ್ಲಾಧಿಕಾರಿಗಳಿಂದ ನಗರದ ಸಿ.ಸಿ ರಸ್ತೆ ಕಾಮಗಾರಿ ಪರಿಶೀಲನೆ

ವಿಜಯಪುರ, ಮಾ.19-ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋರ್ಟ್ ಸರ್ಕಲ್ ರಸ್ತೆಯನ್ನು ಸಿ.ಸಿ ರಸ್ತೆ ಕಾಮಗಾರಿಯನ್ನು ಕೈಗೊಂಡಿದ್ದು, ಈ ರಸ್ತೆಯು ಪ್ರಗತಿಯಲ್ಲಿದ್ದಾಗ ಭೇಟಿ ನೀಡಿ ಪರಿಶೀಲಿಸಲಾಗಿ ಇದೇಕೆಲವು ಕಡೆ ರಸ್ತೆಯ ಮೇಲ್ಭಾಗ ಅಂದರೆ ಸ್ಕಿನ್‍ಔಟ್ ಆಗಿರುವುದು ಕಂಡು ಬಂದಿರುವುದರಿಂದ ಅವುಗಳನ್ನು ಸರಿಪಡಿಸಿದ ನಂತರ ಬಿಲ್ ಸಂದಾಯ ಮಾಡಲು ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ್ ಸೂಚಿಸಿದರು.
ನಗರದಲ್ಲಿ ಇತ್ತೀಚೆಗೆ ನಗರದ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ಕೈಗೊಂಡು ಸಂದರ್ಭದಲ್ಲಿ ಕೋರ್ಟ್ ಸರ್ಕಲ್ ಸಿ.ಸಿ ರಸ್ತೆ ಕಾಮಗಾರಿಯನ್ನು ಪುನಃ ಪರಿಶೀಲನೆ ನಡೆಸಿದಾಗ ಗುತ್ತಿಗೆದಾರರು ಕೆಲವು ಕಡೆ ಕಾಮಗಾರಿಯನ್ನು ಸರಿಪಡಿಸಿ ನಿರ್ವಹಿಸಿದ್ದು, ಸ್ಥಾನಿಕವಾಗಿ ಪರಿಶೀಲನಾ ಸಂದರ್ಭದಲ್ಲಿ ಕಂಡುಬಂದಿರುವುದರಿಂದ ಇನ್ನು ಹಲವಾರು ಕಡೆ ಸ್ಕಿನ್‍ಔಟ್ ಆಗಿರುವುದನ್ನು ಸರಿಪಡಿಸದೆ ಇರುವುದರಿಂದ ಈ ಗುತ್ತಿಗೆದಾರರ ಮೂಲಕ ಈ ಕಾಮಗಾರಿಯನ್ನು ಸಂಪೂರ್ಣವಾಗಿ ಸರಿಪಡಿಸಲು ಸ್ಥಳದಲ್ಲಿ ಹಾಜರಿದ್ದ ಆಯುಕ್ತರು, ಗುತ್ತಿಗೆದಾರರು, ಸಂಬಂಧಪಟ್ಟ ಅಭಿಯಂತರರು ಮತ್ತು ಮೂರನೇ ವ್ಯಕ್ತಿ ತಪಾಸಣಾ ತಂಡದವರಿಗೆ ಅವರು ಸೂಚಿಸಿದರು.
ಈ ಸಿ.ಸಿ ರಸ್ತೆ ಕಾಮಗಾರಿಯನ್ನು ಸಂಪೂರ್ಣವಾಗಿ ಸರಿಪಡಿಸುವವರೆಗೆ ಪೂರ್ಣ ಪ್ರಮಾಣದಲ್ಲಿ ಬಿಲ್ ಸಂದಾಯ ಮಾಡದೇ ಭಾಗಶಃ ಬಿಲ್ ಸಂದಾಯ ಮಾಡಿ ಸುಮಾರು ಶೇ. 10 ರಷ್ಟು ತಡೆಹಿಡಿದು ಸಂದಾಯ ಮಾಡಲು ಆಯುಕ್ತರಿಗೆ ಸೂಚಿಸಿದರು.
ನಗರದಲ್ಲಿ ಈಗಾಗಲೇ ಸರ್ಕಾರದಿಂದ ವಿವಿಧ ಯೋಜನೆಗಳಡಿ ರಸ್ತೆ, ಚರಂಡಿ, ಒಳಚರಂಡಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಅವುಗಳನ್ನು ಗುಣಮಟ್ಟದಾಗಿ ನಿರ್ವಹಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತರು, ಅಭಿಯಂತರರು ಮತ್ತು ಮೂರನೇ ವ್ಯಕ್ತಿ ತಪಾಸಣೆ ತಂಡದವರಿಗೆ ಅವರು ಸೂಚನೆ ನೀಡಿದರು.
ಒಂದು ವೇಳೆ ನಗರದಲ್ಲಿ ಕಳಪೆ ಕಾಮಗಾರಿಗಳು ನಿರ್ವಹಿಸುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ನೇರವಾಗಿ ತಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದರು. ಮತ್ತು ಗುತ್ತಿಗೆದಾರರಿಗೆ ಸಹಿತ ಯಾವುದೇ ತೊಂದರೆ ನೀಡದೆ ಪಾರದರ್ಶಕವಾಗಿ ಬಿಲ್ ಸಂದಾಯ ಮಾಡಬೇಕೆಂದು ಆಯುಕ್ತರಿಗೆ ಅವರು ಸೂಚಿಸಿದರು.
ಒಂದು ವೇಳೆ ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಬಿಲ್ ಸಂದಾಯ ಮಾಡಲು ಗುತ್ತಿಗೆದಾರರಿಗೆ ತೊಂದರೆ ನೀಡುತ್ತಿದ್ದಲ್ಲಿ ಗುತ್ತಿಗೆದಾರರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಬೇಕೆಂದು ಅವರು ಸೂಚಿಸಿದರು. ಈ ಪರಿಶೀಲನಾ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು