ಜಿಲ್ಲಾಧಿಕಾರಿಗಳಿಂದ ಜಿಲ್ಲಾಸ್ಪತ್ರೆಯ ಆಕ್ಸಿಜನ್ ಘಟಕ ಪರಿವೀಕ್ಷಣೆ ವೈದ್ಯರೊಂದಿಗೆ ತುರ್ತು ಸಭೆ

ದಾವಣಗೆರೆ ಮೇ.4:  ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿ ಮೆಡಿಕಲ್ ಆಕ್ಸಿಜನ್ ಘಟಕವನ್ನು ಬಳ್ಳಾರಿಯ ಅಭಿಯಂತರ ಶಾಂತರಾಜು, ಡಿಹೆಚ್‌ಓ, ಡಿಎಸ್ ಮತ್ತು ಇತರೆ ವೈದ್ಯಾಧಿಕಾರಿಗಳು, ತಂತ್ರಜ್ಞರೊಂದಿಗೆ ಪರಿಶೀಲನೆ ನಡೆಸಿದರು. ನಂತರ ವೈದ್ಯರು ಮತ್ತು ಆಕ್ಸಿಜನ್ ಘಟಕ ನಿರ್ವಹಿಸುವ ಸಿಬ್ಬಂದಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಮೆಡಿಕಲ್ ಆಕ್ಸಿಜನ್ ಪ್ಲಾಂಟ್‌ಗೆ ಆಕ್ಸಿಜನ್ ಪೂರೈಕೆ ಮಾಡಲು ಎಂಎಸ್‌ಪಿಎಲ್ ನವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅವರು ಸದರನ್ ಆಕ್ಸಿಜನ್ ಏಜೆನ್ಸಿಯ ಮೂಲಕ ಆಸ್ಪತ್ರೆಗೆ ಸರಬರಾಜು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಆಕ್ಸಿಜನ್ ಕೊರತೆ ಇಲ್ಲ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಈವರೆಗೆ ಒಟ್ಟು 348 ಆಕ್ಸಿಜನ್ ಬೆಡ್ ವ್ಯವಸ್ಥೆ ಇದ್ದು, ಇಷ್ಟು ಬೆಡ್‌ಗೆ ಸಾಕಾಗುವಷ್ಟು ಆಕ್ಸಿಜನ್ ಪೂರೈಕೆ ಆಗುತ್ತಿದೆ. ಆದರೆ ಆಕ್ಸಿಜನ್ ಪ್ಲಾಂಟ್ ಮತ್ತು ವಾಲ್ವ್ನಲ್ಲಿ ಸಣ್ಣಪುಟ್ಟ ತೊಂದರೆಗಳಿದ್ದು ಅದನ್ನು ಬಳ್ಳಾರಿಯ ಇಂಜಿನಿಯರ್ ಪರಿಶೀಲಿಸಿ ಕೆಲವು ಮಾರ್ಗೋಪಾಯ ತಿಳಿಸಿದ್ದಾರೆ ಎಂದರು. ಬಳ್ಳಾರಿಯ ಅಭಿಯಂತರ ಶಾಂತರಾಜು ಮಾತನಾಡಿ ಆಕ್ಸಿಜನ್ ಪ್ಲಾಂಟ್‌ನ ಪೈಪ್‌ಗಳ ಮೇಲೆ ಐಸ್ ರಚನೆಯಾಗುತ್ತಿದ್ದು, ಇದನ್ನು ತಡೆಗಟ್ಟಲು 24*7 ಕೆಲಸ ಮಾಡುವ ಸ್ಪಿçಂಕ್ಲರ್‌ಗಳ ಅಳವಡಿಕೆ ಮಾಡಬೇಕು. ಆಕ್ಸಿಜನ್ ಸ್ಟೋರೇಜ್ ರೂಂನಲ್ಲಿ ಒಂದು ವಾಲ್ವ್ ಬದಲಾವಣೆ ಹಾಗೂ ಬೈಪಾಸ್ ಮಾಡಬೇಕು. ಜೊತೆಗೆ ಆಕ್ಸಿಜನ್ ಟ್ಯಾಂಕ್‌ಗೆ ಜಿಪಿಎಸ್ ಅಳವಡಿಸುವಂತೆ ತಿಳಿಸಿದ್ದಾರೆ. ಇದು ಗ್ಯಾಸ್ ಲೆವೆಲ್ ಕಡಿಮೆ ಆದಾಗ ಅಲಾರ್ಮ್ ಮಾಡುವುದರಿಂದ ಆಕ್ಸಿಜನ್ ಕೊರತೆಯಾಗದಂತೆ ಎಚ್ಚರಿಸುತ್ತದೆ ಎಂದರು. ಜಿಲ್ಲಾಧಿಕಾರಿಗಳು, ಆಕ್ಸಿಜನ್ ಘಟಕ ನಿರ್ವಹಿಸುವ ಅಧಿಕಾರಿ/ಸಿಬ್ಬಂದಿ ಇನ್ನು ಮೂರು-ನಾಲ್ಕು ದಿನಗಳ ಒಳಗೆ ಅಭಿಯಂತರರು ತಿಳಿಸಿರುವಂತಹ ಸೂಚನೆ ಪ್ರಕಾರ ಬದಲಾವಣೆ ಮಾಡಬೇಕೆಂದು ಸೂಚನೆ ನೀಡಿದರು.ಗರ್ಭಿಣಿಯರಿಗೆ ಪ್ರತ್ಯೇಕ ಆಕ್ಸಿಜನ್ ವಾರ್ಡ್: ಓಬಿಜಿ ವಿಭಾಗದ ತಜ್ಞರಾದ ಡಾ.ಶುಕ್ಲ ಶೆಟ್ಟಿ ಮಾತನಾಡಿ, ಕೋವಿಡ್ ಎರಡನೇ ಅಲೆಯಲ್ಲಿ ಗರ್ಭಿಣಿಯರೂ ಹೆಚ್ಚಾಗಿ ಕೋವಿಡ್‌ಗೆ ತುತ್ತಾಗುತ್ತಿದ್ದು, ಆಕ್ಸಿಜನ್ ಅವಲಂಬನೆ ಕೂಡ ಹಿಂದಿಗಿAತ ಹೆಚ್ಚಾಗಿದೆ. ಇದೇ ಕಾರಣಕ್ಕೆ ಮಗು ಗರ್ಭದಲ್ಲಿ ಸಾಯುವ ಸಂಭವ ಕೂಡ ಹೆಚ್ಚು ಇದ್ದು, 10 ಬೆಡ್‌ಗಳ ಪ್ರತ್ಯೇಕ ಆಕ್ಸಿಜನ್ ವಾರ್ಡ್ಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ ಅವರು ವೈರಾಣು ರೂಪಾಂತರ ಪಡೆದ ಹಿನ್ನೆಲೆ ಗರ್ಭಿಣಿಯರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕೆಂಬ ಬಗ್ಗೆ ನಿರ್ಧರಿಸಲು ವೈದ್ಯರ ಒಂದು ಪ್ಯಾನೆಲ್ ರಚಿಸುವಂತೆ ಕೋರಿದರು. ಅಲ್ಲದೇ ಗರ್ಭಿಣಿಯರು ನಿಯಮಿತ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಬರುವುದು ಬೇಡ. ಅತ್ಯಂತ ಕ್ಷಿಪ್ರವಾಗಿ ಸೋಂಕು ತಗುಲುವ ಸಂಭವ ಇರುವುದರಿಂದ ಪಿಹೆಚ್‌ಸಿ, ಹೆರಿಗೆ ಆಸ್ಪತ್ರೆ ಅಥವಾ ಸ್ಥಳೀಯವಾಗಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.ಗರ್ಭಿಣಿಯರು ಅನಗತ್ಯವಾಗಿ ಜಿಲ್ಲಾಸ್ಪತ್ರೆಗೆ ಬರುವುದು ಬೇಡ : ಗರ್ಭಿಣಿಯರು ನಿಯಮಿತ ಚೆಕ್‌ಅಪ್‌ಗೆಂದು 15 ದಿನಗಳು ಅಥವಾ ತಿಂಗಳಿಗೊಮ್ಮೆ ಜಿಲ್ಲಾಸ್ಪತ್ರೆಗೆ ಬರುವುದು ಬೇಡ. ಇಲ್ಲಿ ಸೋಂಕು ತಗುಲುವ ಸಂಭವ ಹೆಚ್ಚಿದ್ದು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಇತರೆ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.ಸಿಟಿ ಸ್ಕಾö್ಯನ್‌ಗೆ ಹೆಚ್ಚು ದರ ಪಡೆದರೆ ಕ್ರಮ : ನಂತರ ಸರ್ಕಾರಿ ಮತ್ತು ಖಾಸಗಿ ಸಿಟಿ ಸ್ಕಾö್ಯನ್ ಮಾಡುವ ತಜ್ಞರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಇತ್ತೀಚೆಗೆ ಸಿಟಿ ಸ್ಕಾö್ಯನ್ ಮೂಲಕ ರೂಪಾಂತರಿ ಕೊರೊನಾ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಟಿ ಸ್ಕಾö್ಯನ್ ಸೆಂಟರ್‌ಗಳಲ್ಲಿ ಸರ್ಕಾರಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದಾರೆಂಬ ದೂರುಗಳು ಬಂದಿವೆ. ಆದ ಕಾರಣ ಯಾವುದೇ ಸ್ಕಾö್ಯನ್ ಸೆಂಟರ್‌ನವರು ನಿಗದಿತ ದರಕ್ಕಿಂತ ಹೆಚ್ಚಿಗೆ ಪಡೆಯಬಾರದು. ಬೋರ್ಡ್ನಲ್ಲಿ ದರದ ವಿವರವನ್ನು ಕಡ್ಡಾಯವಾಗಿ ನಮೂದಿಸಬೇಕು. ಮಾನವೀಯ ದೃಷ್ಟಿಯಿಂದ ರೋಗಿಗಳ ಬಳಿ ಹೆಚ್ಚಿಗೆ ದರ ಪಡೆಯಬಾರದೆಂದು ನಾನು ಕೈಮುಗಿದು ಬೇಡುತ್ತೇನೆ. ಇದಕ್ಕೂ ಮೀರಿ ಹೆಚ್ಚಿಗೆ ಹಣ ಪಡೆಯುವುದು ಗಮನಕ್ಕೆ ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಿಟಿ ಸ್ಕಾö್ಯನ್ ಮಾಡಿಸಿದ ನಂತರ ಕೇವಲ ವರದಿ ಮಾತ್ರ ನೀಡಲಾಗುತ್ತಿದ್ದು ಫಿಲ್ಮ್ ನೀಡುತ್ತಿಲ್ಲ. ಇದರಿಂದ ಕ್ರಾಸ್‌ಚೆಕ್ ಮಾಡಲು ಆಗುವುದಿಲ್ಲ. ಆದ ಕಾರಣ ಇನ್ನು ಮುಂದೆ ಫಿಲ್ಮ್ ನೀಡಬೇಕು. ಇದನ್ನು ನಾವು ಕ್ರಾಸ್‌ಚೆಕ್ ಮಾಡಿಸುತ್ತೇವೆ. ಹಾಗೂ ಸ್ಕಾö್ಯನ್ ಆಡಿಟ್ ಮಾಡಿಸುತ್ತೇವೆ ಎಂದರು.ಸ್ಕಾö್ಯನರ್ ಸ್ಯಾನಿಟೈಸ್ ಮಾಡಿ ಬಳಕೆ : ಸಾಮಾನ್ಯ ಮತ್ತು ಕೋವಿಡ್ ಶಂಕಿತರು ಇಬ್ಬರನ್ನೂ ಒಂದೇ ಸ್ಕಾö್ಯನರ್‌ನಲ್ಲಿ ಪರೀಕ್ಷೆ ಮಾಡುತ್ತಿರುವುದು ಕಂಡು ಬಂದಿದೆ. ಸಿಟಿ ಸ್ಕಾö್ಯನರ್ ಸೂಪರ್ ಸ್ಪೆçಡರ್ ಗಳಾಗುತ್ತಿದ್ದು, ಒಬ್ಬ ರೋಗಿಗೆ ಸ್ಕಾö್ಯನ್ ಮಾಡಿದ ನಂತರ ಸ್ಕಾö್ಯನರ್‌ನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ ಮತ್ತೊಬ್ಬರಿಗೆ ಮಾಡಬೇಕು. ಹಾಗೂ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಕೇಂದ್ರಗಳಲ್ಲಿ ಪಾಲಿಸಬೇಕೆಂದುಸೂಚನೆ ನೀಡಿದರು. ಎಸ್‌ಪಿ ಹನುಮಂತರಾಯ ಮಾತನಾಡಿ, ಇದೊಂದು ರಾಷ್ಟಿçÃಯ ತುರ್ತಿನ ಪರಿಸ್ಥಿತಿಯಾಗಿದ್ದು ವೈದ್ಯರು ಇಂತಹ ಸಂದರ್ಭದಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು. ಸಿಟಿ ಸ್ಕಾö್ಯನ್‌ಗೆ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯದೇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು. ಹೆಚ್ಚಿಗೆ ಬಿಲ್ ಮಾಡಿದರೆ ಜನ ಸಾಮಾನ್ಯರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳು ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕೆಂದರು.ಆಕ್ಸಿಜನ್ ಘಟಕದ ಸಾಮರ್ಥ್ಯಕ್ಕೆ ತಕ್ಕಷ್ಟು ಬೆಡ್‌ಗಳು : ತಜ್ಞ ವೈದ್ಯರ ಸಲಹೆಯಂತೆ ಸದ್ಯಕ್ಕೆ ಜಿಲ್ಲಾಸ್ಪತ್ರೆಯ ಆಕ್ಸಿಜನ್ ಪ್ಲಾಂಟ್‌ನ ಸಾಮರ್ಥ್ಯಕ್ಕೆ ತಕ್ಕಷ್ಟು ಆಕ್ಸಿಜನ್ ಬೆಡ್‌ಗಳನ್ನು ಮಾಡಲಾಗಿದೆ. ಬೆಡ್‌ಸಂಖ್ಯೆ ಹೆಚ್ಚಿಸಿದರೆ ಆಕ್ಸಿಜನ್ ಪ್ರೆಷರ್ ಕಡಿಮೆಯಾಗುವ ಹಿನ್ನೆಲೆಯಲ್ಲಿ ಪ್ರಸ್ತುತ ಆಸ್ಪತ್ರೆಯಲ್ಲಿ 348 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸಭೆಗೂ ಮುನ್ನ ಜಿಲ್ಲಾಧಿಕಾರಿಗಳು ವೈದ್ಯರ ತಂಡದೊAದಿಗೆ ಎಂಐಸಿಯು, ವಿಐಸಿಯು ಮತ್ತು ಇತರೆ ವಾರ್ಡ್ಗಳ ಭೇಟಿ ನೀಡಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ವೈದ್ಯರು ಕೋವಿಡ್ ರೋಗಿಗಳನ್ನು ನಿರ್ವಹಿಸಲು ವೈದ್ಯರ ಮತ್ತು ಶುಶ್ರೂಷಕರ ತಂಡಗಳನ್ನು ಹೆಚ್ಚಿಸುವಂತೆ ಹಾಗೂ ವೈದ್ಯರು ಮತ್ತು ಸಿಬ್ಬಂದಿಗಳ ಹೆಚ್ಚುವರಿ ನಿಯೋಜನೆ ಮಾಡುವಂತೆ ಕೋರಿದರು.ಸಭೆಯಲ್ಲಿ ಪಾಲಿಕೆ ಮಹಾಪೌರ ವೀರೇಶ್ ಎಸ್.ಟಿ., ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್‌ನಾಯಕ್, ಡಿಹೆಚ್‌ಓ ಡಾ.ನಾಗರಾಜ್, ಜಿಲ್ಲಾ ಶಸ್ತç ಚಿಕಿತ್ಸಕ ಡಾ.ಜಯಪ್ರಕಾಶ್, ಡಿಎಸ್‌ಓ ಡಾ.ರಾಘವನ್, ಡಾ.ಶಶಿಧರ್, ಡಾ.ಗಿರೀಶ್, ಡಾ.ರವಿ ಮತ್ತಿತರೆ ತಜ್ಞ ವೈದ್ಯರು ಹಾಜರಿದ್ದರು.