ಜಿಲ್ಲಾಧಿಕಾರಿಗಳಿಂದ ಕವಿತಾಳ್ ಕ್ರಾಸ್ ಚೆಕ್ ಪೋಸ್ಟ್ ಪರಿಶೀಲನೆ

ರಾಯಚೂರು,ಏ.೪-ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಾದ ಆರ್.ವೆಂಕಟೇಶ ಕುಮಾರ ಅವರು ಏ.೩ರ ಶನಿವಾರ ಕವಿತಾಳ ಕ್ರಾಸ್‌ನಲ್ಲಿರುವ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ, ಅಲ್ಲಿ ಕೈಗೊಳ್ಳಲಾದ ವಾಹನಗಳ ತಪಾಸಣೆಯನ್ನು ವೀಕ್ಷಿಸಿದರು.
ಮಸ್ಕಿ ವಿಧಾನಸಭಾ ಕ್ಷೇತ್ರವನ್ನು ಪ್ರವೇಶಿಸುವ ಪ್ರತಿಯೊಂದು ವಾಹನವನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು, ಎಲ್ಲಾ ವಾಹನಗಳ ಡಿಕ್ಕಿ ತೆರೆದು ಪರಿಶೀಲಿಸಬೇಕು, ಪ್ರತಿಯೊಂದು ವಾಹನಗಳ ವಿವರವನ್ನು ರೆಜಿಸ್ಟಾರ್‌ನಲ್ಲಿ ನಮೂದಿಸಬೇಕು, ಸಿಸಿಟಿವಿಯಲ್ಲಿ ಆ ವಾಹನಗಳು ಸೆರೆಯಾಗಬೇಕು, ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಪ್ರತಿಯೊಂದು ವಾಹನವನ್ನು ತಡೆದು ನಿಲ್ಲಿಸಬೇಕು, ತಪಾಸಣಾ ತಂಡದವರು ವಾಹನಗಳಲ್ಲಿರುವ ವಸ್ತುಗಳನ್ನು ಪರಿಶೀಲಿಸಬೇಕು, ಗಸ್ತಿನಲ್ಲಿರುವ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದರು.
ಸಿಬ್ಬಂದಿ ಚಂದಪ್ಪ, ಮಹೆಬೂಬ್, ಬಸವರಾಜಯ್ಯ, ಚನ್ನಬಸವ ಸೇರಿದಂತೆ ಇತರರಿದ್ದರು.