
ಬೀದರ,ಅ 21: ಜಿಲ್ಲಾದ್ಯಂತ ಸಾರೆಗಮಪ ದಸರಾ ದರ್ಬಾರ್ ಕಾರ್ಯಕ್ರಮಗಳು ಅತ್ಯಂತ ವೈಭವಪೂರ್ಣವಾಗಿ ಸಾಗುತ್ತಿವೆ. ನಾಡಿನ ಪ್ರಖ್ಯಾತ ಸಂಗೀತ ಕಲಾವಿದರಾದ ಹಾಗು ಡಮರುವಲೇ ಮಹಾರಾಜರೆಂದೇ ಪ್ರಸಿದ್ಧಿ ಹೊಂದಿರುವ ಮಹೇಶಕುಮಾರ್ ಕುಂಬಾರ ರವರ ನೇತೃತ್ವದಲ್ಲಿ ನಡೆಯುತ್ತಿರುವ ಸಾರೆಗಮಪ ದಸರಾ ದರ್ಬಾರ್ ಕಾರ್ಯಕ್ರಮ ಅ 17 ರಂದು ಭಾಲ್ಕಿ ತಾಲೂಕಿನ ಜೈ ಭವಾನಿ ಮಿತ್ರ ಮಂಡಳಿಯ ಜೈ ಭವಾನಿ ಮಾತಾ ಮಂದಿರ ಭಾಲ್ಕಿಯಲ್ಲಿ ಕಾರ್ಯಕ್ರಮ ಉದ್ಘಾಟನೆ ಗೊಂಡು ಅತಿ ಅದ್ಧುರಿಯಾಗಿ ಕಾರ್ಯಕ್ರಮ ನಡೆಯಿತು. ಅ 18 ರಂದು ಔರಾದ್ ತಾಲೂಕಿನ ಕೌಠಾ (ಕೆ) ಗ್ರಾಮದ ಶ್ರೀ ವೈಶ್ನೋದೇವಿ ಮಹಾಶಕ್ತಿ ಪೀಠ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರ ಮನಸೆಳೆದ ಮಾತಕ ದರ್ಬಾರ್ ಮತ್ತು ನೃತ್ಯೋತ್ಸವ ಕಾರ್ಯಕ್ರಮ ಈ ಕಾರ್ಯಮದಲ್ಲಿ ನಾಡಿನ ಪ್ರಸಿದ್ಧ ಗಾಯಕರಾದ ಧೋಂಡಿರಾಮ ಧುರ್ವೆ, ಬಲರಾಮ ಪಾಂಚಾಳ, ಜೆಸ್ಸಿ ಸೋನವಾನೆ, ಪ್ರೀಯಾ ಗುರುದೇವ, ಕು.ಸ್ನೇಹಾ, ಅಕ್ಷಯ, ವಿವೇಕಾನಂದ ಸ್ವಾಮಿ ಪುನೀತ್ ಮಳಗೆ, ಅಭಿ, ಸಾಯಿ, ಕೃಷ್ಣಾ, ಫರ್ದಿನ್, ಸುರೇಶ, ಸುದರ್ಶನ, ದೀನು, ಜಾನ, ರಚಿತ, ವಿಶಾಲ ಮತ್ತು ಅಜಿತಇವರ ಅದ್ಭುತವಾದ ಪ್ರದರ್ಶನ ನಡೆಯಿತು ಮತ್ತು ಕಾರ್ಯಕ್ರಮದಲ್ಲಿ ಬರ್ದಿಪೂರದ ಶ್ರೀಗಳಾದ ಶ್ರೀ ದತ್ತಗಿರಿ ಮಹಾರಾಜರು, ಓಂ ನಮಶಿವಾಯ್ ಗುರುಗಳು ಪೂಜ್ಯ ಅಮೃತ್ತಪ್ಪ ಮಹಾರಾಜರು ಹಾಗು ಕುಡಂಬೊಲ ಪೂಜ್ಯರಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.ಅ. 19 ರಂದು ನೌಬಾದ್ ನ ಕೆ ಸ್ ರ್ ಪಿ ಜೈ ಭವಾನಿ ಯುವಕ ಮಂಡಳಿಯ ವೇದಿಕೆಯಲ್ಲಿ ನಡೆದ ದಸರಾ ದರ್ಬಾರ್ ಕಾರ್ಯಕ್ರಮ ದಲ್ಲಿ ಭಕ್ತರ ಜನಸಾಗರವೇ ಹರಿದು ಮಾತಾ ಕ ಜಾಗ್ರತ ಕಾರ್ಯಕ್ರಮ ದಲ್ಲಿ ತಮ್ಮ ಸಂಗೀತ ಸುಮಧುರ ಕಂಠದಿಂದ ಡಮಾರುವಳೇ ಮಹಾರಾಜರು ಮಂತ್ರಮುಗ್ಧರಾಗಿಸಿದರು. ನೃತ್ಯೋತ್ಸವ ದಲ್ಲಿ ಮಹಾಕಾಳಿ ಸ್ವರೂಪ, ಶಿವತಾಂಡವ ಮತ್ತು ರಾಮಾಯಣದ ಕಥಾರೂಪಕ, ಕಾರ್ಯಕ್ರಮ ಅತ್ಯಂತ ಜನಮನ ಸೆಳೆಯಿತು.ಈ ಕಾರ್ಯಕ್ರಮ ದಲ್ಲಿ ಹಿರಿಯ ಪೆÇಲೀಸ್ ಅಧಿಕಾರಿಗಳಾದ ಸಿ ಪಿ ಐ ಮಹೇಶ್ ರವರು ಹಾಗೂ ಜೈ ಭವಾನಿ ಯುವಕ ಮಂಡಳಿಯ ಯಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ದೇಶಭಕ್ತಿ ಭಕ್ತಿಗೀತೆಯ ಮೇಲೆ ಕುಣಿದು ಕುಪ್ಪಳಸಿ ಸಂತೋಷ ವ್ಯಕ್ತ ಪಡಿಸಿದರು .ಅ 20 ರಂದು ಬಸವಕಲ್ಯಾಣ ನಗರದ ತ್ರಿಪುರಾಂತ ಓಣಿ ಬಳಿಯ ವಾಲ್ಮಿಕಿ ವೃತ್ತದ ಬಳಿಯ ಜೈ ಭವಾನಿ ಮಾತಾ ಮಂದಿರದಲ್ಲಿಯೂ ಸಾವಿರಾರು ಭಕ್ತರ ಸಮುಖದಲ್ಲಿ ಶ್ರೀ ಮಹೆಶ್ ಕುಮರ್ ಕುಂಬಾರ (ಡಮರುವಾಲೇ ಮಹರಾಜರ) ಅವರ ಏ ತೊ ಸಛ್ ಹಾಯ್ ಕೆ ಭಗವಾನ ಹೈ ಎನ್ನುವಹಾಡಿಗೆ ಮಾತೃತ್ವ, ತ್ಯಾಗ, ಮಮಕಾರದ ಬಗ್ಗೆ ಹಾಡು ಕೇಳಿ ಎಲ್ಲಾ ಯುವಕರು,ಮಹಿಳೆಯರು, ತಮ್ಮ ತಂದೆ ತಾಯಿಯ ಋಣ ಎಂದಿಗೂ ತೀರಿಸಲಾಗದು ಇಂದು ಅರಿತು ಅನಂದ ಭಾಷ್ಪದೇಯ ಕಣ್ಣೀರಿಟ್ಟರು & ಮಂದಿರ್ ಅಬ್ ಬನ್ನೆ ಲಗಾಹೈ ಎನ್ನುವ ಹಾಡಿಗೆ ಅತ್ಯಂತ ವಿಜೃಂಭಣೆಯಿಂದ ಕುಣಿದು ಕುಪ್ಪಳಸಿ ಸಂತೋಷ ವ್ಯಕ್ತ ಪಡಿಸಿದರು ,
ಸಂಸ್ಥೆಯ ಅಧ್ಯಕ್ಷ ಮಹೇಶಕುಮಾರ್ ಕುಂಬಾರ ಅವರು – 21ರಂದು ಬೀದರ್ ನಗರದ ಗುಂಪಾ ಬಳಿಯ ಶಿವಾಜಿ ನಗರದಲ್ಲಿನ ಹನುಮಾನ ಮಂದಿರದ ಆವರಣದಲ್ಲಿ, 22ರಂದು ನಗರದ ಮಂಗಲಪೇಟ್‍ನಲ್ಲಿರುವ ಜೈ ಭವಾನಿ ಮಾತಾ ಮಂದಿರದಲ್ಲಿ ಹಾಗೂ ಸಮಾರೋಪ ಸಮಾರಂಭವು 23ರಂದು ನಗರದ ಸಾಯಿ ಸ್ಕೂಲ್ ಗ್ರೌಂಡ್‍ನಲ್ಲಿ ಶ್ರೀ ರಾಮಲೀಲಾ ಉತ್ಸವ ಸಂದರ್ಭದಲ್ಲಿ ಜರುಗಲಿದೆ ಆ ಕಾರ್ಯಕ್ರಮ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಳಿದ ಈ ಕಾರ್ಯಮದಲ್ಲಿ ಭಾಗಿಯಾಗಿ ದಸರಾದರ್ಬಾರ ಕಾರ್ಯಕ್ರಮದ ಆನಂದ ಸವಿಯಬೇಕೆಂದು ತಿಳಿಸಿದರು.