ಜಿಲ್ಲಾಡಳಿತ ತಕ್ಷಣ ಆಕ್ಸಿಜನ್ ವ್ಯವಸ್ಥೆ ಮಾಡಬೇಕುಃ ವಾಲಿಕಾರ

ವಿಜಯಪುರ, ಮೇ.4-ಜಿಲ್ಲಾಡಳಿತ ತಕ್ಷಣ ಆಕ್ಸಿಜನ್ ವ್ಯವಸ್ಥೆ ಮಾಡಬೇಕೆಂದು ಮಾನವ ಹಕ್ಕುಗಳ ಮಂಡಳಿ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಿಂದ ಎಲ್ಲ ಆಸ್ಪತ್ರೆಗಳಲ್ಲಿ ಆಕ್ಸಿಜನ ಕೊರತೆಯಿಂದ ಜಿಲ್ಲೆಯಲ್ಲಿ ಕರೋನಾ ಮಹಾಮಾರಿ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಕಾರಣ ಖಾಸಗಿ ಹಾಗು ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಹಾಗು ಆಕ್ಸಿಜನ್ ಕೊರತೆ ತುಂಬ ಇರುವದರಿಂದ ಕೆರೋನಾ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಜನರು ಭಯಭೀತರಾಗಿದ್ದಾರೆ. ಕೆರೋನಾ ಪೀಡಿತ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ
ಆಸ್ಪತ್ರೆಯ ಮುಂಭಾಗ ಕೆರೋನ ಪೀಡಿತ ರೋಗಿಗಳ ರೋಧನ ಹೇಳತೀರದು ಕೊರೋನಾ ಪೀಡಿತರನ್ನು ಸರಕಾರಿ ಆಸ್ಪತ್ರೆಯಲ್ಲಿ ಕಡ್ಡಾಯ ಚಿಕಿತ್ಸೆ ನೀಡಬೇಕು. ನಿರ್ಲಕ್ಷತನ ತೋರಬಾರದು. ಚಿಕಿತ್ಸೆ ಪಡೆಯುವುದು ಅವರ ಹಕ್ಕು. ಜಿಲ್ಲಾಡಳಿತ ತಕ್ಷಣ ಎಲ್ಲ ಆಸ್ಪತ್ರೆಯಗಳಿಗೆ ಆಕ್ಸಿಜನ ವ್ಯವಸ್ಥೆಗೆ ತಕ್ಷಣ ಕ್ರಮ ಜರುಗಿಸಿಬೇಕೆಂದು ಹಾಸಿಂಪೀರ ವಾಲೀಕಾರ ಪ್ರತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.