ಜಿಲ್ಲಾಡಳಿತ ಆಡಳಿತ ಭವನ ನಿರ್ಮಾಣಕ್ಕೆ ಹೆರಿಟೇಜ್ ಫೌಂಡೇಶನ್‍ದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ವಿಜಯಪುರ, ಎ.9-ಹೊಸ ಜಿಲ್ಲಾಡಳಿತ ಆಡಳಿತ ಭವನ ನಿರ್ಮಾಣ ಮಾಡುವಂತೆ ಒತ್ತಾಯಿಸಿ ದ ಬಿಜಾಪುರ ಹೆರಿಟೇಜ್ ಫೌಂಡೇಶನ್ ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸುಮಾರು ವರ್ಷಗಳಿಂದ ಪ್ರವಾಸೋಧ್ಯಮ ವಂಚಿತವಾಗಿದ್ದು ಐತಿಹಾಸಿಕ ನಗರ ಸುಮಾರು ವರ್ಷಗಳಿಂದ ಅರಕಿಲ್ಲಾದಲ್ಲಿ ಆದಿಲ್‍ಶಾಹಿ ಅರಮನೆಗಳಿದ್ದು ಸುಮಾರು 40 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದ ಕಾರಣ ಅರಕಿಲ್ಲಾದಲ್ಲಿ ಹತ್ತಾರು ಸ್ಮಾರಕಗಳಿದ್ದು ಉದಾಹರಣೆಗೆ ಜಿಲ್ಲಾಧಿಕಾರಿಗಳ ಮನೆ, ಜಿಲ್ಲಾಧಿಕಾರಿಗಳ ಕಛೇರಿ, ಎಸ್ಪಿ ಮನೆ, ಜಡ್ಜ್ ಹಾಗೂ ದರ್ಗಾ ಜೈಲ್, ಬಿ.ಎಸ್.ಎನ್.ಎಲ್. ಆಫೀಸ್, ತಾಲೂಕು ಪಂಚಾಯತ, ಕಂದಾಯ ಇಲಾಖೆ, ಸೈನಿಕರ ಕಲ್ಯಾಣ ಸೊಸಾಯಿಟಿ ಸೇರಿದಂತೆ ಜಿಲ್ಲಾಡಳಿತ ಆವರಣದಲ್ಲಿ ಐತಿಹಾಸಿಕ ಸ್ಮಾಕರಗಳ ದಕ್ಕೆ ತರುತ್ತಿರುವ ಆಯಾ ಇಲಾಖೆಗಳ ಕಚೇರಿಯನ್ನು ಬೇರೆಕಡೆ ಸ್ಥಳಾಂತರಿಸಬೇಕು. ಅರಕಿಲ್ಲಾ ಒಂದು ಬೆಂಗಳೂರು ಲಾಲ್ ಬಾಗ್ ಗಾರ್ಡ್‍ನ ತರ ನಿರ್ಮಿಸಿ ವಾಯು ವಿಹಾರಕ್ಕೆ ಸಾರ್ವಜನಿಕರಿಗೆ ಒಳ್ಳೆಯ ವಾತಾವರಣ ನಿರ್ಮಿಸಲು ಹಾಗೂ ಸಂಜೆ ವೇಳೆ ಎಲ್ಲಾ ಸ್ಮಾರಕಗಳಲ್ಲಿ ಬೆಳಕಿನ ವ್ಯವಸ್ಥೆ ಹಾಗೂ ಕಾರಂಜಿ ವ್ಯವಸ್ಥೆ ಕಲ್ಪಿಸಿ ಸಂಜೆ ರಸದೌತಣ ಸವಿಯಲು ಜಿಲ್ಲೆಯ ಜನರಿಗೆ ಹಾಗೂ ಪ್ರವಾಸಗರಿಗೆ ಒಳ್ಳೆಯ ಪರಿಸರ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇನ್ನಿತರ ಐತಿಹಾಸಿಕ ಸ್ಮಾರಕಗಳು ಕರ್ನಾಟಕ ಸರ್ಕಾರದ ಅಧೀನದಲ್ಲಿವೆ. ಆದಷ್ಟು ಬೇಗ ಆದಿಲ್ ಶಾ ಅರಮನೆಗಳು ಪ್ರವಾಸಿಗರಿಗೆ ಮುಕ್ತವಾಗಲಿ ಹಾಗೂ ನಮ್ಮ ಪ್ರವಾಸೋದ್ಯಮ ಬೆಳೆಯುವಲ್ಲಿ ಪ್ರಮುಖ ಪಾತ್ರ ವಿಜಯಪುರ ವೈಭವದ ನಾಡಾಗಲಿ ಹಾಗೂ ಉದ್ಯೋಗದ ಅವಕಾಶಗಳು ದೊರಕಲಿ ಎನ್ನುವುದು ನಮ್ಮೆಲ್ಲರ ಗುರಿಯಾಗಿದೆ. ಅದರಂತೆ ಗೋಲ್‍ಗುಂಬಜ್ ಸ್ಮಾರಕಕ್ಕೆ ಲಿಫ್ಟ್ ಕೂಡಿಸುವುದನ್ನು ಕೈ ಬಿಡಬೇಕು ಎಂದು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ದ ಬಿಜಾಪುರ ಹೆರಿಟೇಜ್ ಫೌಂಡೇಶನ್‍ನಿನ ಪದಾಧಿಕಾರಿಗಳಾದ ಅಮೀತ್ ಹುದ್ದಾರ, ಅನೀಸ್ ಮನಿಯಾರ, ಯುವರಾಜ ಜೋಳಕೆ, ಹಮಜಾ ಮಹಿಬೂಬ್, ಆಸೀಫ್ ಹೆರಕಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.